ಬಾಂಬ್ ಸ್ಫೋಟದಿಂದ ಶಿಥಿಲಗೊಂಡಿದ್ದ ಸೇತುವೆ ಮೇಲೆ ಪುಟಿನ್ ಕಾರು ಓಡಿಸಿದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ-ಉಕ್ರೇನ್ ಯುದ್ಧದ ವೇಳೆ ರಷ್ಯಾದ ಕ್ರೈಮಿಯಾದಲ್ಲಿನ ಸೇತುವೆಯ ಮೇಲೆ ಬಾಂಬ್ ಸ್ಫೋಟಗೊಂಡು ಸೇತುವೆ ಸಂಪೂರ್ಣ ಶಿಥಿಲಗೊಂಡಿತ್ತು. ಅದರ ಮೇಲೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಈ ಸೇತುವೆಯ ಮೇಲೆ ತಮ್ಮದೇ ಆದ ಮರ್ಸಿಡಿಸ್ ಕಾರನ್ನು ಓಡಿಸಿರುವ ವಿಡಿಯೋ ವೈರಲ್‌ ಆಗಿದೆ.

19 ಕಿಮೀ ಉದ್ದದ ಸೇತುವೆಯು ರಸ್ತೆ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ಉಕ್ರೇನ್ ದಾಳಿಯಲ್ಲಿ ಹಾನಿಗೊಳಗಾದ ಈ ಸೇತುವೆಯನ್ನು ಅಧಿಕಾರಿಗಳು ಪ್ರಸ್ತುತ ಪುನಃಸ್ಥಾಪಿಸುತ್ತಿದ್ದಾರೆ. ಉಪ ಪ್ರಧಾನಿ ಮರಾತ್ ಖುನ್ಸುಲಿನ್ ಈ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಪುಟಿನ್ ಭೇಟಿಯ ಸಂದರ್ಭದಲ್ಲಿ ಅವರು ಸ್ಥಳದಲ್ಲಿದ್ದು, ಸೇತುವೆ ಕಾಮಗಾರಿಯನ್ನು ಪುಟಿನ್ ಅವರಿಗೆ ವಿವರಿಸಿದರು. ಸೇತುವೆಯ ಮೇಲೆ ಸ್ವಲ್ಪ ದೂರ ಕಾರಿನಲ್ಲಿ ಹೋದ ಪುಟಿನ್ ನಂತರ ಕಾರಿನಿಂದ ಇಳಿದು ನಡೆದರು. ಈ ಸಂದರ್ಭದಲ್ಲಿ ಅಲ್ಲಿನ ಬಿಲ್ಡರ್ ಗಳೊಂದಿಗೆ ಮಾತನಾಡಿದರು. ಸೇತುವೆಯ ಎಡಭಾಗ ಅಲ್ಪಸ್ವಲ್ಪ ಹಾಳಾಗಿದ್ದು, ದುರಸ್ತಿಗೊಳಿಸುವುದರ ಜೊತೆಗೆ ಸೇತುವೆಯನ್ನು ಯಥಾಸ್ಥಿತಿಗೆ ತರುವಂತೆ ಸೂಚಿಸಲಾಯಿತು. ಈ ಘಟನೆಯನ್ನು ಸ್ಥಳೀಯ ಮಾಧ್ಯಮಗಳು ಬಿತ್ತರಿಸಿದವು.

ಇನ್ನೊಂದೆಡೆ ಪುಟಿನ್ ಅನಾರೋಗ್ಯದ ಬಗ್ಗೆ ಕೆಲ ದಿನಗಳಿಂದ ಅಪಪ್ರಚಾರ ನಡೆಯುತ್ತಿರುವುದು ಗೊತ್ತಾಗಿದೆ. ಇತ್ತೀಚೆಗಷ್ಟೇ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪುಟಿನ್ ಆರೋಗ್ಯ ಹಾಗೂ ಉತ್ಸಾಹದಿಂದ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಪುಟಿನ್ ಅನಾರೋಗ್ಯದ ಬಗ್ಗೆ ನಡೆಯುತ್ತಿರುವ ಅಪಪ್ರಚಾರಕ್ಕೆ ಕಡಿವಾಣ ಹಾಕಿದಂತಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!