ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಉಕ್ರೇನ್ ನಗರದ ಖೆರ್ಸನ್ ಮೇಲೆ ರಷ್ಯಾ ನಡೆಸಿದ ಭೀಕರ ಶೆಲ್ ದಾಳಿಯು 15 ನಾಗರಿಕರನ್ನು ಬಲಿತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ವಾರಗಳಲ್ಲಿ ರಷ್ಯಾದ ವೈಮಾನಿಕ ದಾಳಿಗಳು ಉಕ್ರೇನ್‌ನ ಮೂಲಸೌಕರ್ಯವನ್ನು ಕೇಂದ್ರೀಕರಿಸಿ ನಡೆಯುತ್ತಿದೆ. ಚಳಿಗಾಲದ ಸಮೀಪಿಸುತ್ತಿರುವುದರಿಂದ ತಾಪಮಾನವು ತೀರಾ ಕುಸಿಯುತ್ತಿದ್ದು ಈ ಸಂದರ್ಭವನ್ನು ಬಳಸಿಕೊಂಡು ಉಕ್ರೇನ್ ಅನ್ನು ಸಂಪೂರ್ಣವಾಗಿ ಮಣಿಸಲು ಯೋಜನೆ ರೂಪಿಸುತ್ತಿದೆ.