ಹೊಸದಿಗಂತ ಡಿಜಿಟಲ್ ಡೆಸ್ಕ್
ಪೂರ್ವ ಉಕ್ರೇನ್ ನಗರದ ಬಖ್‌ಮುಟ್‌ನ ಮೇಲೆ ರಷ್ಯಾದ ದಾಳಿಗಳು ನಡೆಸಿದ ಭೀಕರ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿ 17 ಜನರು ಗಾಯಗೊಂಡಿದ್ದಾರೆ ಎಂದು ಉಕೇನ್ ಪ್ರಾದೇಶಿಕ ಗವರ್ನರ್ ಹೇಳಿದ್ದಾರೆ. ರಷ್ಯಾವು ಉಕ್ರೇನ್ ನ ಡೊನ್‌ಬಾಸ್‌ನ ಪ್ರದೇಶಗಳನ್ನು ಮರಳಿ ವಶಪಡಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ.
ರಷ್ಯಾ ದಾಳಿಯಲ್ಲಿ ವಸತಿ ಕಟ್ಟಡಗಳು, ಅಂಗಡಿಗಳು, ಸಾಂಸ್ಕೃತಿಕ ಭವನ ಮತ್ತು ಆಡಳಿತ ಕೇಂದ್ರ ಹಾಗೂ ಮಾರುಕಟ್ಟೆಗಳಿಗೆ ಹೆಚ್ಚಿನ ಹಾನಿಯಾಗಿದೆ ಎಂದು ಡೊನೆಟ್ಸ್ಕ್ ಪ್ರಾದೇಶಿಕ ಗವರ್ನರ್ ಪಾವ್ಲೊ ಕಿರಿಲೆಂಕೊ ಹೇಳಿದ್ದಾರೆ.
“ನಗರದಲ್ಲಿ ಕಳೆದ 4 ದಿನಗಳಿಂದ ನೀರು ಮತ್ತು ವಿದ್ಯುತ್ ಪೂರೈಕೆ ನಿಂತುಹೋಗಿದೆ” ಎಂದು ಅವರು ಹೇಳಿದ್ದಾರೆ. ʼರಷ್ಯಾದೊಂದಿಗೆ ನಡೆಯುತ್ತಿರುವ ಹೋರಾಟದಿಂದಾಗಿ ದುರಸ್ತಿ ಅಸಾಧ್ಯವಾಗಿದೆʼ ಎಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಡೊನೆಟ್ಸ್ಕ್ ಪ್ರದೇಶದಲ್ಲಿ ಒಟ್ಟು ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ನೆರೆಯ ಖಾರ್ಕಿವ್ ಪ್ರದೇಶದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಷ್ಯಾದ ಪಡೆಗಳ ಆಕ್ರಮಣದ ವಿರುದ್ಧ ಖಾರ್ಕಿವ್‌ನಲ್ಲಿ ಉಕ್ರೇನ್ ಪ್ರತಿದಾಳಿಯು ವೇಗವನ್ನು ಪಡೆಯುತ್ತಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳಿದ್ಗದಾರೆ. ಸುಮಾರು ಆರು ತಿಂಗಳ ಕಾಲ ರಷ್ಯಾದ ಪಡೆಗಳು ಆಕ್ರಮಿಸಿಕೊಂಡಿದ್ದ ಸುಮಾರು 30,000 ಜನರಿರುವ ಬಲಾಕ್ಲಿಯಾವನ್ನು ಉಕ್ರೇನ್ ಪಡೆಗಳು ಹಿಂಪಡೆದಿವೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುರುವಾರ ಘೋಷಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ