ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ರಷ್ಯಾ ಮೇಲೆ ಇದೀಗ ಸೈಬರ್ ದಾಳಿ ಆರಂಭಿಸಿದೆ. ಫೇಸ್‌ಬುಕ್ ಖಾತೆ ಹ್ಯಾಕ್‌ಗೆ ರಷ್ಯಾ ಪ್ರಯತ್ನಿಸುತ್ತಿದೆ ಎಂದು ಮೆಟಾ ಪತ್ತೆ ಹಚ್ಚಿದೆ. ಉಕ್ರೇನಿಯನ್ ಮಿಲಿಟರಿ ಅಧಿಕಾರಿಗಳು, ಪತ್ರಕರ್ತರು ಹಾಗೂ ರಾಜಕಾರಣಿಗಳ ಫೇಸ್‌ಬುಕ್ ಖಾತೆ ಹ್ಯಾಕ್‌ಗೆ ರಷ್ಯಾ ಪ್ರಯತ್ನಿಸಿದೆ.
ಕಳೆದ ಎರಡು ದಿನದಲ್ಲಿ ಫೇಸ್‌ಬುಕ್ ಹಾಗೂ ಇನ್ಸ್‌ಟಾಗ್ರಾಂನಿಂದ 40 ನಕಲಿ ಖಾತೆ, ಗ್ರೂಪ್ ಹಾಗೂ ಪೇಜ್‌ಗಳ ನೆಟ್‌ವರ್ಕ್‌ಗಳನ್ನು ತೆಗೆದುಹಾಕಲಾಗಿದೆ. ಈ ಖಾತೆಗಳು ರಷ್ಯಾ ಮತ್ತು ಉಕ್ರೇನ್‌ನಿಂದ ಕಾರ್ಯನಿರ್ವಹಿಸುತ್ತಿವೆ. ಇಂದು ಬಿಡುಗಡೆಯಾದ ಬ್ಲಾಗ್‌ನಲ್ಲಿ ಗೋಸ್ಟ್ ರೈಡರ‍್ಸ್ ಎನ್ನುವ ಗುಂಪಿನಿಂದ ಹ್ಯಾಕಿಂಗ್ ಮಾಡಲು ಯತ್ನಿಸಲಾಗಿದೆ.
ಈ ಗ್ರೂಪ್‌ನಿಂದ ಸಾಮಾಜಿಕ ಮಾರ್ಧಯಮ ಅಕೌಂಟ್‌ಗಳಿಗೆ ಪ್ರವೇಶ ಪಡೆದು ಉಕ್ರೇನ್ ಸೇನೆ ದುರ್ಬಲವಾಗಿದೆ ಎಂದು ತೋರಿಸಲು ಪ್ರಯತ್ನ ಪಡುತ್ತಿದೆ ಎಂದು ಮೆಟಾ ಹೇಳಿದೆ.