ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ವಿರುದ್ಧದ ಯುದ್ಧವು ತನ್ನ ಯೋಜನೆಯಂತೆ ಉತ್ತಮವಾಗಿ ಸಾಗುತ್ತಿದೆ ಎಂಬ ರಷ್ಯಾ ಹೇಳಿಕೆಗೆ ತಿರುಗೇಟು ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನ್ ನಲ್ಲಿ ರಷ್ಯನ್ ಸೈನಿಕರ ʼಸಾವಿನ ಯೋಜನೆʼಯನ್ನು ಅನುಮೋದಿಸುವುದರ ಬಗ್ಗೆಯೂ ಪುಟಿನ್ ಮಾಹಿತಿ ನೀಡಬೇಕು ಎಂದು ಲೇವಡಿ ಮಾಡಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪುಟಿನ್, ರಷ್ಯಾವು ತನ್ನೆಲ್ಲಾ ಉದಾತ್ತ ಗುರಿಗಳನ್ನು ಸಾಧಿಸುತ್ತಿದೆ. ಉಕ್ರೇನ್ ನಲ್ಲಿ ಯೋಜನಾಬದ್ಧವಾಗಿ ಹಾಗೂ ಶಾಂತವಾಗಿ ತನ್ನ ವಿಶೇಷ ಸೈನಿಕ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ ಎಂದಿದ್ದರು.
ಪುಟಿನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಝೆಲೆನ್ಸ್ಕಿ, ಪುಟಿನ್ ಎಷ್ಟು ರಷ್ಯನ್ನರ ಸಾವಿನ ಯೋಜನೆ ತಯಾರಿಸಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ವ್ಯಂಗ್ಯವಾಡಿದ್ದಾರೆ.
ರಷ್ಯಾವು ಯುದ್ಧ ಪ್ರಾರಂಭವಾದಾಗಿನಿಂದ 1,351 ರಷ್ಯಾ ಸೈನಿಕರು ಉಕ್ರೇನ್ ನಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದೆ. ಆದರೆ ಸಾವಿನ ನೈಜ ಸಂಖ್ಯೆಯು 20,000 ಕ್ಕೆ ಹತ್ತಿರದಲ್ಲಿದೆ ಎಂದು ಉಕ್ರೇನ್ ಹೇಳುತ್ತದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ