Thursday, December 8, 2022

Latest Posts

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಭಾರತಕ್ಕೆ ರಷ್ಯಾ ಬೆಂಬಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಬೇಕೆಂದು ಭಾರತದ ಬಹುಕಾಲದ ಬೇಡಿಕೆಗೆ ರಷ್ಯಾ ದನಿಗೂಡಿಸಿದೆ. ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾರತಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.

77 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲಾವ್ರೊವ್, “ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳ ಪ್ರಾತಿನಿಧ್ಯದ ಮೂಲಕ ಭದ್ರತಾ ಮಂಡಳಿಯನ್ನು ಇನ್ನಷ್ಟು ಪ್ರಜಾಪ್ರಭುತ್ವಗೊಳಿಸುವ ಅವಕಾಶ ಇದೆ. ಭಾರತ ಮತ್ತು ಬ್ರೆಜಿಲ್ ಅನ್ನು ಅಂತರರಾಷ್ಟ್ರೀಯ ನಾಯಕರು ಪರಿಗಣಿಸಿ ಅವುಗಳಿಗೆ ಶಾಶ್ವತ ಸದಸ್ಯತ್ವ ನೀಡಬೇಕೆಂದು ಅಭಿಪ್ರಾಯಪಟ್ಟರು.

ಭಾರತದ ಖಾಯಂ ಸದಸ್ಯತ್ವಕ್ಕೆ ಯುನೈಟೆಡ್ ಸ್ಟೇಟ್ಸ್ ಸ್ಪಷ್ಟ ಬೆಂಬಲವನ್ನು ತೋರಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಭಾರತದ ಪ್ರಯತ್ನವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಇದರ ಜೊತೆಗೆ, UNSC ಯ ಖಾಯಂ ಸದಸ್ಯರಾಗಲು ಮತ್ತು ಆಫ್ರಿಕನ್ ದೇಶಗಳ ಪ್ರಾತಿನಿಧ್ಯಕ್ಕಾಗಿ G4 ದೇಶಗಳಲ್ಲಿ (ಜರ್ಮನಿ, ಜಪಾನ್, ಬ್ರೆಜಿಲ್ ಮತ್ತು ಭಾರತ) ಅಭಿವೃದ್ಧಿಯನ್ನು ಗಮನಿಸಬಹುದು ಎಂಬುದನ್ನು ತಿಳಿಸಿದರು.

ಬಡತನ, ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗಗಳು, ಜಾಗತಿಕ ಆಹಾರ ಭದ್ರತೆ, ಭಯೋತ್ಪಾದನೆ ನಿಗ್ರಹ ಮತ್ತು ಅಂತರರಾಷ್ಟ್ರೀಯ ಸಂಘರ್ಷಗಳಿಗೆ ಪರಿಹಾರಗಳನ್ನು ನೀಡುವಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಜಂಟಿ ಹೇಳಿಕೆಗೆ ಸಹಿ ಮಾಡಿದವರು ತಿಳಿಸಿದ್ದಾರೆ. ಸಹಿ ಮಾಡಿದವರಲ್ಲಿ ಬ್ರೆಜಿಲ್, ಡೊಮಿನಿಕಾ, ಗ್ರೆನಡಾ, ಹೈಟಿ, ಭಾರತ, ಜಮೈಕಾ, ಮಂಗೋಲಿಯಾ, ನೈಜೀರಿಯಾ, ಪಪುವಾ ನ್ಯೂ ಗಿನಿಯಾ, ದಕ್ಷಿಣ ಆಫ್ರಿಕಾ ಸೇರಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!