ಹೊಸದಿಗಂತ ಡಿಜಿಟಲ್ ಡೆಸ್ಕ್
ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು ಬೀಜಿಂಗ್ಗೆ ಹಠಾತ್ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು ಉಕ್ರೇನ್ ಸಂಘರ್ಷದ ಬಗ್ಗೆ ಚರ್ಚೆ ನಡೆದಿದೆ ಎಂದು ಮೆಡ್ವೆಡೆವ್ ಹೇಳಿದ್ದಾರೆ.
ಈಗ ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷರಾಗಿರುವ ಮೆಡ್ವೆಡೆವ್ ಅವರು ತಮ್ಮ ಟೆಲಿಗ್ರಾಮ್ ಚಾನೆಲ್ನಲ್ಲಿ ಕ್ಸಿ ಅವರನ್ನು ಭೇಟಿಯಾಗುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಚೀನಾ ಮತ್ತು ರಷ್ಯಾದ ಅಧಿಕಾರಿಗಳ ನಡುವಿನ ಸಭೆಯನ್ನು ದೃಢಪಡಿಸಿದ್ದಾರೆ.
ಮೆಡ್ವೆಡೆವ್ ಅವರು ಮತ್ತು ಕ್ಸಿ ಅವರು ಉಕ್ರೇನ್ ವಿಚಾರ ಹಾಗೂ ಎರಡು ದೇಶಗಳ ಕಾರ್ಯತಂತ್ರದ ಪಾಲುದಾರಿಕೆಯ ಬಗ್ಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ಬಿಟ್ಟುಕೊಟ್ಟಿಲ್ಲ.
“ನಾವು ಚೀನಾ ಮತ್ತು ರಷ್ಯಾದ ಎರಡು ಆಡಳಿತ ಪಕ್ಷಗಳ ನಡುವಿನ ಸಹಕಾರವನ್ನು ಚರ್ಚಿಸಿದ್ದೇವೆ … ಆರ್ಥಿಕತೆ ಮತ್ತು ಕೈಗಾರಿಕಾ ಬೆಳವಣಿಗೆ ಸೇರಿದಂತೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯೊಳಗೆ ದ್ವಿಪಕ್ಷೀಯ ಸಹಕಾರದ ಕುರಿತು ಮಾತುಕತೆ ನಡೆದಿದೆ. ನಾವು ಅಂತರರಾಷ್ಟ್ರೀಯ ವಿಷಯಗಳನ್ನೂ ಚರ್ಚಿಸಿದ್ದೇವೆ.. ಸಹಜವಾಗಿ ಅದರಲ್ಲಿ ಉಕ್ರೇನ್ನಲ್ಲಿನ ಸಂಘರ್ಷದ ವಿಚಾರವೂ ಸೇರಿದೆ” ಎಂದು ಮೆಡ್ವೆಡೆವ್ ಹೇಳಿದ್ದಾರೆ. “ಮಾತುಕತೆಗಳು ಉಪಯುಕ್ತವಾಗಿವೆ” ಎಂದು ಅವರು ಹೇಳಿದರು.
ಉಕ್ರೇನ್ನ ಆಕ್ರಮಣಕ್ಕಾಗಿ ಶಿಕ್ಷಿಸಲು ಪಾಶ್ಚಿಮಾತ್ಯ ನಿರ್ಬಂಧಗಳನ್ನು ಹೇರಿದ ನಂತರ ರಷ್ಯಾ ಬೀಜಿಂಗ್ ಕಡೆಗೆ ಹೆಚ್ಚು ವಾಲುತ್ತಿದೆ.
ಪಾಶ್ಚಿಮಾತ್ಯ ಸಂಬಂಧಗಳ ನಷ್ಟವನ್ನು ಸರಿದೂಗಿಸಲು ರಷ್ಯಾ ಚೀನಾದೊಂದಿಗೆ ನಿಕಟ ಆರ್ಥಿಕ, ರಾಜಕೀಯ ಮತ್ತು ಭದ್ರತಾ ಸಂಬಂಧಗಳನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ಜೊತೆಗೆ ಪಾಶ್ಚಿಮಾತ್ಯ ವಿರೋಧಿ ಒಕ್ಕೂಟದಲ್ಲಿ ಕ್ಸಿ ಅವರನ್ನು ಸಂಭಾವ್ಯ ಮಿತ್ರನನ್ನಾಗಿ ನೋಡುತ್ತದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ