ಸಾಮಾಗ್ರಿಗಳು
ಮಟನ್ – 1 ಕೆಜಿ
ಸಿಪ್ಪೆ ಸುಲಿದು ಹೆಚ್ಚಿಕೊಂಡ ಆಲೂಗಡ್ಡೆ – 2
ಮೊಸರು – ಮುಕ್ಕಾಲು ಕಪ್
ಸಾಸಿವೆ ಎಣ್ಣೆ – 5 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಲವಂಗ – 1 ಟೀಸ್ಪೂನ್
ಏಲಕ್ಕಿ – 2
ದಾಲ್ಚಿನ್ನಿ ಚಕ್ಕೆ – 1 ಇಂಚು
ಸೋಂಪು – 1 ಟೀಸ್ಪೂನ್
ಹೆಚ್ಚಿದ ಈರುಳ್ಳಿ – 600 ಗ್ರಾಂ
ಅರಿಶಿನ ಪುಡಿ – 1 ಟೀಸ್ಪೂನ್
ಗರಂ ಮಸಾಲೆ ಪುಡಿ – 2 ಟೀಸ್ಪೂನ್
ಕೊತ್ತಂಬರಿ ಪುಡಿ – 3 ಟೀಸ್ಪೂನ್
ಮೆಣಸಿನ ಪುಡಿ – 2 ಟೀಸ್ಪೂನ್
ಜೀರಿಗೆ ಪುಡಿ – 3 ಟೀಸ್ಪೂನ್
ಸೀಳಿದ ಹಸಿರು ಮೆಣಸಿನಕಾಯಿ – 5
ಹೆಚ್ಚಿದ ಶುಂಠಿ – 2 ಟೀಸ್ಪೂನ್
ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
ಒಣ ಕೆಂಪು ಮೆಣಸಿನಕಾಯಿ – 3
ತುಪ್ಪ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಂತೆ
ಮಾಡುವ ವಿಧಾನ
ಮೊದಲಿಗೆ ಮಾಂಸಕ್ಕೆ ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, 2 ಟೀಸ್ಪೂನ್ ಸಾಸಿವೆ ಎಣ್ಣೆ, 2-3 ಟೀಸ್ಪೂನ್ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸುಮಾರು 8 ಗಂಟೆಗಳ ಕಾಲ ಈ ಮಿಶ್ರಣವನ್ನು ಫ್ರಿಜ್‌ನಲ್ಲಿಡಿ.
ಭಾರವಾದ ತಳದ ಕಬ್ಬಿಣದ ಕಡಾಯಿಗೆ ಉಳಿದ ಸಾಸಿವೆ ಎಣ್ಣೆಯನ್ನು ಹಾಕಿ, ಈರುಳ್ಳಿಯನ್ನು ಸೇರಿಸಿ ಹುರಿಯಿರಿ. ಒಣಗಿದ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ.
ಈರುಳ್ಳಿ ಹುರಿಯುತ್ತಿರುವ ವೇಳೆ ಬ್ಲೆಂಡರ್‌ಗೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿಗಳನ್ನು ಹಾಕಿ ಒರಟಾದ ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ಈರುಳ್ಳಿಗೆ ಈ ಪೇಸ್ಟ್ ಸೇರಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ. ಈಗ ಗರಂ ಮಸಾಲಾ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಜೀರಿಗೆ ಪುಡಿಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಮಸಾಲೆ ಪೇಸ್ಟ್ ಮಾಡಿ.* ಇದನ್ನು ಈರುಳ್ಳಿ ಮಿಶ್ರಣಕ್ಕೆ ಸೇರಿಸಿ.
ಮ್ಯಾರಿನೇಟ್ ಮಾಡಿದ ಮಟನ್ ಸೇರಿಸಿ, ಉರಿಯನ್ನು ಕಡಿಮೆ ಇಟ್ಟು ಸುಮಾರು 90 ನಿಮಿಷಗಳ ಕಾಲ ಮುಚ್ಚಿ ಮತ್ತು ಬೇಯಿಸಿಕೊಳ್ಳಿ. ಮಟನ್ ಸುಡದಂತೆ ಆಗಾಗ ಅದನ್ನು ಪರೀಕ್ಷಿಸುತ್ತಿರಿ. ತಳ ಹಿಡಿಯದಂತೆ ತಡೆಯಲು ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಸಿಂಪಡಿಸುತ್ತಿರಿ.
ಈಗ ಉಳಿದ ಮೊಸರನ್ನು ಚೆನ್ನಾಗಿ ವಿಪ್ ಮಾಡಿಕೊಂಡು, ಮಟನ್ ಮಿಶ್ರಣಕ್ಕೆ ಸೇರಿಸಿ. ಹೆಚ್ಚಿದ ಆಲೂಗಡ್ಡೆ ಸೇರಿಸಿ, ನೀರು ಆವಿಯಾಗುವವರೆಗೆ ಮಾಂಸವನ್ನು ಬೇಯಿಸುವುದನ್ನು ಮುಂದುವರಿಸಿ. ಉಪ್ಪು ಬೆರೆಸಿ, ಮಟನ್ ಮೆತ್ತಗಾಗುವವರೆಗೆ ನಿಧಾನವಾಗಿ ಬೇಯಿಸುವುದನ್ನು ಮುಂದುವರಿಸಿ. ಈಗ ಉರಿಯನ್ನು ಆಫ್ ಮಾಡಿ, ತುಪ್ಪವನ್ನು ಸೇರಿಸಿ, ನಿಧಾನವಾಗಿ ಬೆರೆಸಿ. ಇದೀಗ ಬೆಂಗಾಲಿ ಮಟನ್ ಕರಿ ಕೋಶಾ ಮಾಂಗ್ಶೋ ಸವಿಯಲು ಸಿದ್ಧವಾಗಿದೆ.