ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್‌ನಿಂದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್‌ರನ್ನು ಬ್ಯಾನ್ ಮಾಡಬೇಕೆಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಈ ರಿಯಾಕ್ಷನ್ ಗೆ ಕಾರಣವಾಗಿದ್ದು ಒಂದು ವಿಡಿಯೋ. ಅಭಿಮಾನಿಗಳ ಜೊತೆ ಸೆಲ್ಫಿ ತೆಗೆಯುವ ವೇಳೆ ಪರಾಗ್ ತೋರಿದ ವರ್ತನೆ ನೆಟ್ಟಿಗರ ಪಿತ್ತ ನೆತ್ತಿಗೆರುವಂತೆ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 6 ರನ್‌ಗಳಿಂದ ತಂಡ ಗೆದ್ದ ಬಳಿಕ ಅಭಿಮಾನಿಗಳು ಪರಾಗ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಂದೆ ಬಂದಿದ್ದಾರೆ. ಈ ವೇಳೆ ಪರಾಗ್ ಸೆಲ್ಫಿ ಕ್ಲಿಕ್ಕಿಸಿ ಮೊಬೈಲ್ ಅನ್ನು ನೇರವಾಗಿ ಕೈಯಲ್ಲಿ ನೀಡದೇ ಎಸೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ಮೊಬೈಲ್ ಕೈಯಲ್ಲಿ ಕೊಡಬಹುದಿತ್ತು. ಅದನ್ನು ಯಾಕೆ ಎಸೆಯಬೇಕಿತ್ತು? ಇಷ್ಟೊಂದು ಅಹಂಕಾರ ತೋರಿಸುವ ಅಗತ್ಯ ಏನು? ಇಷ್ಟೊಂದು ಧಿಮಾಕು ಇರುವ ರಿಯಾನ್ ಪರಾಗ್ ಅವರನ್ನು ಐಪಿಎಲ್‌ನಿಂದಲೇ ಬ್ಯಾನ್ ಮಾಡಬೇಕು ಎಂದು ಅಭಿಮಾನಿಗಳು ಸಿಟ್ಟು ಹೊರ ಹಾಕುತ್ತಿದ್ದಾರೆ.