ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಗ್ನಿಪಥ್ ಮಾದರಿ ಯೋಜನೆ. ಇದನ್ನು ಯಾರೂ ವಿರೋಧ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ. ತಮ್ಮ ಸ್ವಗ್ರಾಮ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಅಗ್ನಿಪಥ್ ಕುರಿತಾದ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಅಮೆರಿಕಾ, ಬ್ರಿಟನ್ ಸಹಿತ ವಿಶ್ವದ ಹಲವು ಬಲಾಢ್ಯ ರಾಷ್ಟ್ರಗಳಲ್ಲಿ 20 ವರ್ಷ ಮೇಲ್ಪಟ್ಟ ಯುವಕರು ಕಡ್ಡಾಯವಾಗಿ ಎರಡು ವರ್ಷ ಸೈನಿಕ ಶಿಕ್ಷಣ ಪಡೆಯಬೇಕು ಎಂಬ ನಿಯಮವೇ ಇದೆ. ಭಾರತದಲ್ಲಿ ಈ ಯೋಜನೆ ಜಾರಿಯಾಗಿರುವುದು ಅತ್ಯುತ್ತಮವಾಗಿದೆ ಎಂದ ಅವರು, ಅಲ್ಪಾವಧಿಗೆ ಸೇನೆಗೆ ಯುವಕರನ್ನು ನೇಮಿಸಿಕೊಳ್ಳುವುದನ್ನು ಸ್ವಾಗತಿಸುತ್ತೇನೆ ಎಂದರು.
ಸೇವೆ ಬಳಿಕ ಅಗ್ನಿವೀರರಿಗೆ ಸೇನೆಯ ಬೇರೆ ವಿಭಾಗಗಳು, ಸರ್ಕಾರದ ಇತರ ಹುದ್ದೆಗಳು, ಖಾಸಗಿ ಕಂಪೆನಿಗಳಲ್ಲಿಯೂ ಕೆಲಸ ಮಾಡುವ ಅವಕಾಶವಿದೆ. ದನ್ನು ರಾಜಕೀಯ ದೃಷ್ಟಿಯಿಂದ ನೋಡದೆ ನಾವೆಲ್ಲರೂ ದೇಶದ ಹಿತದ ದೃಷ್ಟಿಯಿಂದ ನೋಡಬೇಕು ಎಂದು ಅವರು ಹೇಳಿದರು.