Saturday, February 4, 2023

Latest Posts

ಎಸ್.ಆರ್.ಪಾಟೀಲ ಮನೆಯಲ್ಲಿ ಕೈ ನಾಯಕರ ಗೌಪ್ಯ ಚರ್ಚೆ

ಹೊಸದಿಗಂತ ವರದಿ ಬಾಗಲಕೋಟೆ:

ಪ್ರಜಾಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ಬಾಗಲಕೋಟೆಗೆ ಆಗಮಿಸಿರುವ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ ಮನೆಗೆ ಭೇಟಿ ನೀಡಿದರು. ಪ್ರಮುಖ ನಾಯಕರು ಗೌಪ್ಯ ಚರ್ಚೆ ನಡೆಸಿರುವುದು ಕೂತುಹಲಕ್ಕೆ ಕಾರಣವಾಗಿದೆ.

ಜಿಲ್ಲೆಯ ರಾಜಕಾರಣ, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ, ಮುಂಬರುವ ಚುನಾವಣೆ ಎದುರಿಸುವ ಕುರಿತು ಗಹನ ಚರ್ಚೆ ನಡೆಸಿದರು. ಎಸ್.ಆರ್.ಪಾಟೀಲ ಮುನಿಸಿಕೊಂಡ ಪರಿಣಾಮ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಪ್ರಜಾಧ್ವನಿ ಯಾತ್ರೆ ನೆಪದಲ್ಲಿ ನವನಗರದಲ್ಲಿರುವ ಎಸ್.ಆರ್.ಪಾಟೀಲ ಅವರ ಮನೆಯಲ್ಲಿ ನಾಯಕ ಸಿದ್ದರಾಮಯ್ಯ ಆಗಮಿಸುವ ಮೂಲಕ ರಾಜಕೀಯದಲ್ಲಿ ಯಾರು ಶಾಶ್ವತ ಶತೃ, ಮಿತ್ರರರಲ್ಲ ಎನ್ನುವುದು ಸಾಬೀತು ಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸುರ್ಜೆವಾಲ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ,ಯಾತ್ರೆ ಉಸ್ತುವಾರಿ ಬಸಬರಾಜ ರಾಯರೆಡ್ಡಿ ಸೇರಿದಂತೆ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!