ಎಲ್ಲಾ ಮಾದರಿಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಎಸ್.ಶ್ರೀಶಾಂತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಎಕ್ಸ್ಪ್ರೆಸ್ ಎಸ್.ಶ್ರೀಶಾಂತ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವ 29 ವರ್ಷದ ಭಾರತದ ವೇಗದ ಬೌಲರ್ ಎಸ್ ಶ್ರೀಶಾಂತ್ ಅವರು, ನನ್ನ ಕುಟುಂಬ, ನನ್ನ ತಂಡದ ಆಟಗಾರರು ಮತ್ತು ಭಾರತದ ಜನರನ್ನು ಪ್ರತಿನಿಧಿಸುವುದು ಒಂದು ಗೌರವವಾಗಿದೆ.ಆಟವನ್ನು ಪ್ರೀತಿಸುವ ಪ್ರತಿಯೊಬ್ಬರೂ ತುಂಬಾ ದುಃಖದಿಂದ, ಆದರೆ ವಿಷಾದವಿಲ್ಲದೆ, ನಾನು ಇದನ್ನು ಭಾರವಾದ ಹೃದಯದಿಂದ ಹೇಳುತ್ತೇನೆ. ನಾನು ಭಾರತೀಯ ದೇಶೀಯ (ಪ್ರಥಮ ದರ್ಜೆ ಮತ್ತು ಎಲ್ಲಾ ಸ್ವರೂಪಗಳು) ಕ್ರಿಕೆಟ್ ನಿಂದ ನಿವೃತ್ತನಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
2007ರ ಟಿ20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ವಿಜೇತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶ್ರೀಶಾಂತ್ ಬಳಿಕ ಐಪಿಎಲ್ ನಲ್ಲಿ ವಿವಾದಕ್ಕೆ ಸಿಲುಕಿ ಅನೇಕ ವರ್ಷಗಳ ಕಾಲ ಕ್ರಿಕೆಟ್ ನಿಂದ ನಿಷೇಧಕ್ಕೆ ಒಳಗಾಗಿದ್ದರು. ಬಳಿಕ ಸೆಪ್ಟೆಂಬರ್ 2020 ರಲ್ಲಿ, ವೇಗದ ಬೌಲರ್ ಮೇಲಿನ ನಿಷೇಧವು ಕೊನೆಗೊಂಡಿತು.
ಬಳಿಕ ಕೇರಳ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!