ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ಹೃತಿಕ್ ರೋಷನ್ ವಿಚ್ಛೇದನದ ನಂತರ ಸಬಾ ಆಜಾದ್ ಜೊತೆ ಕಾಣಿಸಿಕೊಂಡಿದ್ದಾರೆ. ಡೇಟಿಂಗ್‌ನಲ್ಲಿರುವ ಬಗ್ಗೆ ಮುಚ್ಚುಮರೆ ಮಾಡದ ಈ ಜೋಡಿ ಎಲ್ಲಾ ಕಡೆ ಹಾಯಾಗಿಯೇ ಓಡಾಡುತ್ತಿದ್ದಾರೆ.
ಹೃತಿಕ್ ರೋಷನ್ ಸಹೋದರಿಯ ಬರ್ಥ್‌ಡೇ ಪಾರ್ಟಿಯಲ್ಲಿ ಸಬಾ ಕಾಣಿಸಿಕೊಂಡಿದ್ದು, ಫ್ಯಾಮಿಲಿ ಫಂಕ್ಷನ್‌ನಲ್ಲಿ ಸಬಾ ಕಾಣಿಸಿರುವುದಕ್ಕೆ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಡೇಟಿಂಗ್ ವಿಷಯವನ್ನೇ ಸೆಲೆಬ್ರಿಟಿಗಳು ಸೀಕ್ರೆಟ್ ಆಗಿ ಇಟ್ಟಿರುತ್ತಾರೆ. ಇನ್ನು ಫ್ಯಾಮಿಲಿ ಜೊತೆ ಇದನ್ನು ಮಿಕ್ಸ್ ಮಾಡೋದು ಇಲ್ಲ. ಆದರೆ ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಸ್ವಲ್ಪ ಸಮಯದಲ್ಲೇ ಹೃತಿಕ್ ಸಬಾ ಜೊತೆ ಓಡಾಟ ಮಾಡುತ್ತಿದ್ದಾರೆ.
ಪಶ್ಮಿನಾ ರೋಷನ್ ಬರ್ಥಡೇಯಲ್ಲಿ ಸಬಾ ಭಾಗಿಯಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಶೀಘ್ರವೇ ಸಬಾ ಕೂಡ ಇವರ ಕುಟುಂಬಕ್ಕೆ ಸೇರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.