Monday, November 28, 2022

Latest Posts

15 ವರ್ಷವಾಯಿತು, ನಿನ್ನನ್ನು ನೋಡುತ್ತಲೇ ಇದ್ದೇನೆ: ದೀಪಿಕಾ ಪಡುಕೋಣೆ ಕುರಿತು ಶಾರುಖ್ ವಿಶೇಷ ಟ್ವೀಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಬಾಲಿವುಡ್ ಗೆ ಎಂಟ್ರಿ ಕೊಟ್ಟು ನಿನ್ನೆಗೆ 15 ವರ್ಷಗಳು. ದೀಪಿಕಾ 2007 ರಲ್ಲಿ ಶಾರುಖ್ ಜೊತೆ ನಾಯಕಿಯಾಗಿ ‘ಓಂ ಶಾಂತಿ ಓಂ’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಆ ಸಿನಿಮಾ ಆ ಕಾಲದಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ದೀಪಿಕಾ ಪಡುಕೋಣೆ ಇಂಡಸ್ಟ್ರಿಗೆ ಎಂಟ್ರಿಯಾಗಿ 15 ವರ್ಷಗಳಾದ ಸಂದರ್ಭದಲ್ಲಿ ಶಾರುಖ್ ಫೋಟೋ ಶೇರ್ ಮಾಡಿ ವಿಶೇಷ ಟ್ವೀಟ್ ಮಾಡಿದ್ದಾರೆ.

ಶಾರುಖ್ ಮತ್ತು ದೀಪಿಕಾ ಪಡುಕೋಣೆ ಈಗಾಗಲೇ ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್ ಮತ್ತು ಚೆನ್ನೈ ಎಕ್ಸ್‌ಪ್ರೆಸ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಮೂರೂ ಚಿತ್ರಗಳು ಯಶಸ್ವಿಯಾದವು. ಪಠಾಣ್ ಚಿತ್ರದ ಮೂಲಕ ಶೀಘ್ರದಲ್ಲೇ ಇಬ್ಬರೂ ಮತ್ತೆ ಒಂದಾಗಲಿದ್ದಾರೆ. ಈ ನಾಲ್ಕು ಸಿನಿಮಾಗಳಲ್ಲಿ ಶಾರುಖ್ ದೀಪಿಕಾ ಅವರ ಕಣ್ಣುಗಳನ್ನು ನೋಡುತ್ತಿರುವ ದೃಶ್ಯಗಳ ಫೋಟೋವನ್ನು ಶೇರ್ ಮಾಡಿದ್ದಾರೆ.

ದೀಪಿಕಾ ಮತ್ತು ತಾನಿರುವ ಫೋಟೋವನ್ನು ಶಾರುಖ್‌ ಖಾನ್‌ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, “ಅದ್ಭುತ 15 ವರ್ಷಗಳು. ನಿಮ್ಮ ಪರಿಶ್ರಮ ಮತ್ತು ಅತ್ಯುತ್ತಮ ಪ್ರದರ್ಶನದಿಂದ ನೀವು ಇಲ್ಲಿಯವರೆಗೆ ಬೆಳೆದಿದ್ದೀರಿ. ನಾನು ಅಂದಿನಿಂದಲೂ ನಿನ್ನನ್ನು ನೋಡುತ್ತಿದ್ದೇನೆ, ನಿನ್ನನ್ನು ನೋಡುತ್ತಿದ್ದೇನೆ, ನಾನು ನಿನ್ನನ್ನು ನೋಡುತ್ತಿದ್ದೇನೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ. ಇವರಿಬ್ಬರು ಒಟ್ಟಿಗೆ ಮಾಡಿದ ಮೂರು ಚಿತ್ರಗಳು ಉತ್ತಮ ಯಶಸ್ಸು ಕಂಡಿವೆ. ಇವರಿಬ್ಬರೂ ಮತ್ತೊಮ್ಮೆ ಜೊತೆಯಾಗಿ ನಟಿಸುತ್ತಿರುವ ಈ ಚಿತ್ರ ಯಶಸ್ವಿಯಾಗುವುದು ಖಂಡಿತಾ ಅಂತಿದಾರೆ ಪ್ರೇಕ್ಷಕರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!