ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕರ ಜ್ಯೋತಿ ಯಾತ್ರೆಗಾಗಿ ಇಂದು ಸಂಜೆ 5 ಗಂಟೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗುವುದು.
ತಂತ್ರಿ ಕಂಠರಾರ್ ರಾಜೀವರ್ ಅವರ ಉಪಸ್ಥಿತಿಯಲ್ಲಿ, ಪ್ರಧಾನ ಅರ್ಚಕ ಎಸ್ ಅರುಣ್ ಕುಮಾರ್ ನಂಬೂದಿರಿ ದೇವಸ್ಥಾನದ ಬಾಗಿಲು ತೆರೆದು ದೀಪ ಬೆಳಗಲಿದ್ದಾರೆ. ಮಾಳಿಗಪ್ಪುರಂ ದೇವಸ್ಥಾನವನ್ನು ತೆರೆಯಲು ಪ್ರಮುಖ ಅರ್ಚಕ ವಾಸುದೇವನ್ ನಂಬೂದಿರಿಗೆ ಕೀಲಿಕೈ ಹಸ್ತಾಂತರಿಸಲಾಗುವುದು.
18ನೇ ಮೆಟ್ಟಿಲು ಬಳಿ ಕುಂಡಕ್ಕೆ ಬೆಂಕಿ ಸ್ಪರ್ಶಿಸಿದ ನಂತರ ಭಕ್ತರಿಗೆ 18 ಮೆಟ್ಟಿಲು ಹತ್ತಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ವಿಶೇಷ ಪೂಜೆ ಇರುವುದಿಲ್ಲ. ಮಕರ ಜ್ಯೋತಿ ಪೂಜೆಯು ಡಿಸೆಂಬರ್ 31 (ನಾಳೆ) ರಂದು ಬೆಳಿಗ್ಗೆ 3 ಗಂಟೆಗೆ ಪ್ರಾರಂಭವಾಗುತ್ತದೆ.