Monday, October 2, 2023

Latest Posts

ಸೆಲ್ಫಿ ಜೊತೆ ಪ್ರಶ್ನೆ ಕೇಳಿದ ಸಚಿನ್ ತೆಂಡುಲ್ಕರ್: ಫ್ಯಾನ್ಸ್ ಫುಲ್ ಕನ್ಫ್ಯೂಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಜಿ ದಿಗ್ಗಜ ಕ್ರಿಕೆಟಿಗರು ಸೇರಿಕೊಂಡು ರಸ್ತೆ ಸುರಕ್ಷತಾ ಟೂರ್ನಿಯಲ್ಲಿ ನಡೆಸುತ್ತಿದ್ದು, ಸದ್ಯ ಟೂರ್ನಿ ಅಂತಿಮ ಘಟ್ಟ ತಲುಪಿದೆ.
ಎರಡನೇ ಆವೃತ್ತಿಯ ರೋಡ್ ಸೇಫ್ಟಿ ಟೂರ್ನಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ, ಶೇನ್ ವ್ಯಾಟ್ಸನ್, ಬ್ರೆಟ್ ಲೀ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಪಾಲ್ಗೊಂಡಿದ್ದಾರೆ.

ಮೊದಲ ಹಂತದ ಪಂದ್ಯಗಳನ್ನು ಮುಗಿಸಿ ಕಾನ್ಪುರದಿಂದ ಇಂದೋರ್‌ಗೆ ದಿಗ್ಗಜರು ವಿಮಾನ ಹತ್ತಿದ್ದಾರೆ. ಈ ವೇಳೆ ಸಚಿನ್ ತೆಂಡುಲ್ಕರ್ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ಚಿತ್ರದಲ್ಲಿ ಎಷ್ಟು ಅಂತಾರಾಷ್ಟ್ರೀಯ ರನ್ ಹಾಗೂ ವಿಕೆಟ್‌ಗಳಿವೆ ಎಂದು ಸಚಿನ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಲು ಹರಸಾಹಸ ಪಡಬೇಕಾಗಿದೆ.

ತೆಂಡುಲ್ಕರ್ ಹಂಚಿಕೊಂಡ ಫೋಟೋದಲ್ಲಿ ಮೊದಲ ಸಾಲಿನಲ್ಲಿ ಸಚಿನ್ ಹಾಗೂ ಯುವರಾಜ್ ಸಿಂಗ್ ಕುಳಿತಿದ್ದಾರೆ. ಇನ್ನು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ದಿಗ್ಗಜ ಕ್ರಿಕೆಟಿಗರು ಇದೇ ವಿಮಾನದಲ್ಲಿದ್ದಾರೆ.
ರೋಡ್ ಸೇಫ್ಟಿ ಟೂರ್ನಿಯಲ್ಲಿ ಪಾಲ್ಗೊಂಡಿರುವ 8 ತಂಡದ ಕ್ರಿಕೆಟಿಗರ ಫೋಟೋವನ್ನು ಸಚಿನ್ ಹಂಚಿಕೊಂಡಿದ್ದಾರೆ. ಕಾನ್ಪುರದಲ್ಲಿ ಮೊದಲ ಹಂತದ ಪಂದ್ಯಗಳನ್ನು ಮುಗಿಸಿದ ರೋಡ್ ಸೇಫ್ಟಿಟೂರ್ನಿಯ ತಂಡಗಳು ಇದೀಗ ಇಂದೋರ್‌ನಲ್ಲಿ ಪಂದ್ಯ ಆಡಲು ಬಂದಿಳಿದೆ.

ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಕೇಳಿದ ಪ್ರಶ್ನೆಗೆ ಸುಲಭವಾಗಿ ಉತ್ತರಿಸುವುದು ಕಷ್ಟ. ಹೀಗಾಗಿ ಅಭಿಮಾನಿಗಳು ಗುಡ್ ಲಕ್, ಗಾಡ್ ಆಫ್ ಕ್ರಿಕೆಟ್, ಲವ್ ಯೂ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವನ್ನೂ ಮಾಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!