Friday, September 29, 2023

Latest Posts

ಚುನಾವಣಾ ‘ರಾಷ್ಟ್ರೀಯ ಐಕಾನ್’ ಆಗಿ ಸಚಿನ್ ತೆಂಡೂಲ್ಕರ್ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಚುನಾವಣಾ ಪ್ರಕ್ರಿಯೆಯಲ್ಲಿಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಚುನಾವಣಾ ‘ರಾಷ್ಟ್ರೀಯ ಐಕಾನ್’ ಆಗಿ ಆಯ್ಕೆ ಮಾಡಲಾಗಿದೆ.

ದೆಹಲಿಯಲ್ಲಿಇಂದುತೆಂಡೂಲ್ಕರ್ ಮತ್ತು ಚುನಾವಣಾ ಸಮಿತಿ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ.ಮೂರು ವರ್ಷಗಳ ಒಪ್ಪಂದ ಇದಾಗಿದ್ದು, ಸಚಿನ್ ತೆಂಡೂಲ್ಕರ್ ಮತದಾರರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಶೇಷವಾಗಿ 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ (ಲೋಕಸಭೆಗೆ) ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಯುವಕರೊಂದಿಗೆ ತೆಂಡೂಲ್ಕರ್ ಅವರ ಸಾಟಿಯಿಲ್ಲದ ಪ್ರಭಾವವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಚುನಾವಣಾ ಆಯೋಗವು ಮತದಾನದ ಬಗ್ಗೆ ನಗರ ಮತ್ತು ಯುವಕರ ನಿರಾಸಕ್ತಿಯ ಸವಾಲುಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ.ಚುನಾವಣಾ ಆಯೋಗ ಕಳೆದ ವರ್ಷ ನಟ ಪಂಕಜ್ ತ್ರಿಪಾಠಿ ಅವರನ್ನು ರಾಷ್ಟ್ರೀಯ ಐಕಾನ್ ಎಂದು ನೇಮಕ ಮಾಡಿತ್ತು. ಈ ಹಿಂದೆ, 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಎಂಎಸ್ ಧೋನಿ, ಅಮೀರ್ ಖಾನ್ ರನ್ನು ನೇಮಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!