ಯುವರಾಜ್ ಸಿಂಗ್ ತಂದೆಯ ಗರಡಿಯಲ್ಲಿ ಸಚಿನ್ ಪುತ್ರನ ಟ್ರೈನಿಂಗ್: ಮತ್ತೆ ಕಮ್ ಬ್ಯಾಕ್ ನತ್ತ ಅರ್ಜುನ್ ಚಿತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತೆ ಕಮ್ ಬ್ಯಾಕ್ ಆಗಲು ಭರ್ಜರಿ ತಯಾರಿನಡೆಸುತ್ತಿದ್ದು, ಇದಕ್ಕಾಗಿ ಸತತ ಪರಿಶ್ರಮ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಮುಂಬೈ ಕ್ರಿಕೆಟ್ ತಂಡವನ್ನ ತೊರೆದು ಗೋವಾವನ್ನ ಸೇರುವ ಮೂಲಕ ಸುದ್ದಿಯಾಗಿದ್ದ ಅರ್ಜುನ್ ಗೆ ಮುಂಬೈ ತಂಡದಲ್ಲಿ ತೀವ್ರ ಸ್ಪರ್ಧೆ ಹಿನ್ನಲೆಯಲ್ಲಿ ಅವಕಾಶಗಳು ದೊರೆಯುತ್ತಿರಲಿಲ್ಲ.ಹೀಗಾಗಿ ಆತ ಗೋವಾ ಕ್ರಿಕೆಟ್‌ ತಂಡವನ್ನು ಈಗಾಗಲೇ ಸೇರಿಕೊಂಡಿದ್ದಾರೆ.

ಇದೀಗ ಮುಂಬರುವ ರಣಜಿ ಟೂರ್ನಿಗೂ ಮುನ್ನ ಅರ್ಜುನ್ ತೆಂಡೂಲ್ಕರ್ ಭರ್ಜರಿ ತಯಾರಿ ಆರಂಭಿಸಿದ್ದಾರೆ. ಗೋವಾ ಕ್ರಿಕೆಟ್‌ ಅಸೋಸಿಯೇಷನ್‌ನ ಟ್ರೈನಿಂಗ್‌ ಕ್ಯಾಂಪ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ಇಲ್ಲಿ ಇನ್ನೊಂದು ಆಸಕ್ತಿ ವಿಷಯ ಏನೆಂದರೆ , ಅರ್ಜುನ್ ತೆಂಡೂಲ್ಕರ್ ಗೆ ಭಾರತದ ಸೂಪರ್ ಸ್ಟಾರ್ ಕ್ರಿಕೆಟ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ತರಬೇತಿ ನೀಡುತ್ತಿರುವುದು.

 

ಹೌದು, ಅರ್ಜುನ್ ತೆಂಡೂಲ್ಕರ್ ಅವರು ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸುಧಾರಿಸಲು ಮತ್ತು ಅವರ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಲು ಚಂಡೀಗಢದಲ್ಲಿರುವ ಯೋಗರಾಜ್ ಸಿಂಗ್ (ಯುವರಾಜ್ ಸಿಂಗ್ ಅವರ ತಂದೆ) ಅವರ ಡಿಎವಿ ಕಾಲೇಜಿನಲ್ಲಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅರ್ಜುನ್ ತೆಂಡೂಲ್ಕರ್‌ ರಣಜಿ ಟೂರ್ನಮೆಂಟ್‌ನಲ್ಲಿ ಆಡಲು ಅವಕಾಶಕ್ಕಾಗಿ ಇನ್ನೂ ಎದುರು ನೋಡುತ್ತಿದ್ದಾರೆ. ಇದುವರೆಗೆ ಮುಂಬೈ ಪರ 2020/21ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ನಲ್ಲಿ ಎರಡು ಟಿ20 ಪಂದ್ಯಗಳನ್ನ ಮಾತ್ರ ಆಡಿದ್ದಾರೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು
ಐಪಿಎಲ್ 2022ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು ದಯನೀಯವಾಗಿ ಸೋತಿದ್ದು, ಸತತ ಎಂಟು ಪಂದ್ಯಗಳಲ್ಲಿ ಸೋಲನುಭವಿಸಿತು. ಈ ಸಂದರ್ಭದಲ್ಲಿ ಅರ್ಜುನ್‌ಗೆ ಅವಕಾಶ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅರ್ಜುನ್‌ಗೆ ಮಾತ್ರ ಮುಂಬೈ ತಂಡದಲ್ಲಿ ಅವಕಾಶ ಸಿಗದ ಕಾರಣ ಗೋವಾದತ್ತ ಮುಖಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!