ರಾಫೆಲ್ ನಡಾಲ್ ಕುರಿತು ಸಚಿನ್ ಕುತೂಹಲಕಾರಿ ಟ್ವೀಟ್, ಕ್ರೀಡಾಸ್ಪೂರ್ತಿಗೆ ಪ್ರಶಂಸೆಯ ಸುರಿಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ರವಿಶಾಸ್ತ್ರಿ ಸ್ಪೇನ್ ಟೆನ್ನಿಸ್ ತಾರೆ ರಾಫೆಲ್ ನಡಾಲ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಟ್ವಿಟರ್‌ನಲ್ಲಿ ʻರಾಫೆಲ್ ದಿ ಗ್ರೇಟ್ʼ ಎಂದು ರಿಟ್ವೀಟ್‌ಗಳ ಸುರಿಮಳೆಯೇ ಹರಿಯುತ್ತಿದೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಟೆನ್ನಿಸ್ ಪಂದ್ಯಾವಳಿಯಲ್ಲಿ ರಾಫೆಲ್‌ ಕ್ರೀಡಾ ಸ್ಪೂರ್ತಿಯನ್ನು ಪಸರಿಸಿದರು. ಹೀಗಾಗಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ನಡಾಲ್ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.

ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಪುರುಷರ ಸಿಂಗಲ್ಸ್ ಟೆನಿಸ್ ಟೂರ್ನಿಯ ಅಂಗವಾಗಿ ಶುಕ್ರವಾರ ಪ್ಯಾರಿಸ್‌ನಲ್ಲಿ ಸ್ಪೇನ್ ಟೆನ್ನಿಸ್ ತಾರೆ ರಾಫೆಲ್ ನಡಾಲ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ನಡುವೆ ಸೆಮಿಫೈನಲ್ ಪಂದ್ಯ ನಡೆಯಿತು. ಸೆಮಿಫೈನಲ್‌ನಲ್ಲಿ, ನಡಾಲ್ ಮೊದಲ ಸೆಟ್‌ನಲ್ಲಿ 7–6 (10/8) ಟೈಬ್ರೇಕ್‌ನಲ್ಲಿ ಗೆದ್ದರು. ಎರಡನೇ ಸೆಟ್‌ನ 12 ನೇ ಗೇಮ್‌ನ ಕೊನೆಯಲ್ಲಿ ನಡಾಲ್ ಅವರ ರಿಟರ್ನ್ ಶಾಟ್ ಸ್ವೀಕರಿಸುವಾಗ ಜ್ವೆರೆವ್ ಕಾಲು ಜಾರಿ ಕೆಳಗೆ ಬಿದ್ದರು. ಆದರೂ ಪ್ರಯತ್ನ ಬಿಡದೆ ಆಟವಾಡಲು ಪ್ರಯತ್ನಿಸಿದರೂ ಆಪಾರವಾದ ನೋವಿನಿಂದ ಅದು ಸಾಧ್ಯವಾಗದೆ ಪಂದ್ಯದಿಂದ ಹಿಂದೆ ಸರಿದರು. ಕೊನೆಗೆ ನಡಾಲ್‌ ಅವರನ್ನು ವಿಜೇತ ಎಂದು ಘೋಷಣೆ ಮಾಡಲಾಯಿತು.

ಕಾಲಿಗೆ ಪೆಟ್ಟಾದ ಕಾರಣ ಟೆನ್ನಿಸ್‌ ಕೋರ್ಟ್‌ನಿಂದ ಜ್ವೆರೆವ್ ಹೊರಬರಲು ಪರದಾಡಿದರು.‌ ನಡಾಲ್‌ ಕೂಡಲೇ ಜ್ವೆರೆವ್‌ ಬಳಿ ಹೋಗಿ ಪ್ರೀತಿಯ ಅಪ್ಪುಗೆಯನ್ನು ನೀಡಿ, ಕೋರ್ಟ್‌ನಿಂದ ಆಚೆ ಕರೆದೊಯ್ದರು. ಈ ವಿಡಿಯೀಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನಡಾಲ್ ಕ್ರೀಡಾಸ್ಫೂರ್ತಿಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

ಪಂದ್ಯದ ವೇಳೆ ಗಾಯದಿಂದ ಬಳಲುತ್ತಿದ್ದ ಜ್ವೆರೆವ್ ಜತೆಗಿನ ರಾಫೆಲ್ ನಡಾಲ್ ವರ್ತನೆಯನ್ನು ಶ್ಲಾಘಿಸಿ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ. ಅದೇ ರೀತಿ ಮತ್ತೊಬ್ಬ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ನಡಾಲ್ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ನಡಾಲ್ ಅವರು ಕ್ರೀಡಾ ಮನೋಭಾವವನ್ನು ಪಸರಿಸಿದ್ದಾರೆ ಎಂದು ಶ್ಲಾಘಿಸಿದರು. ಸಚಿನ್ ಮತ್ತು ಶಾಸ್ತ್ರಿ ಅವರ ಟ್ವೀಟ್‌ಗಳಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!