ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ ಆಶ್ರಮದಲ್ಲಿ ತಮ್ಮ ಮಕ್ಕಳನ್ನು ಅಕ್ರಮವಾಗಿ ಇಟ್ಟಕೊಳ್ಳಲಾಗಿದೆ ಎನ್ನುವ ಕುರಿತು ಸದ್ಗುರು ಜಗ್ಗಿ ವಾಸುದೇವ್ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ತಮ್ಮ ಮಕ್ಕಳಿಬ್ಬರಿಗೆ ಮಂಕು ಬೂದಿ ಎರಚಿ, ಆಶ್ರಮದಲ್ಲಿ ಜಗ್ಗಿ ವಾಸುದೇವ್ ಅಕ್ರಮವಾಗಿ ಇರಿಸಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು (ಮಕ್ಕಳ ತಾಯಿ) ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಮದ್ರಾಸ್ ಹೈಕೋರ್ಟ್‌ನಲ್ಲೂ ದೂರು ದಾಖಲಿಸಿದ್ದರಿಂದ ದಾಳಿಗೆ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸದ್ಗುರು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ಕೋರ್ಟ್‌ಗೆ ಸಲ್ಲಿಕೆಯಾದ ವರದಿ ಪ್ರಕಾರ ಪ್ರಕರಣವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಸದ್ಗುರು ಅವರು ಕೊಯಮತ್ತೂರಿನ ಇಶಾ ಫೌಂಡೇಶನ್‌ಗೆ ಸೇರಿದ ಆಶ್ರಮದಲ್ಲಿ ಯಾರನ್ನೂ ಅಕ್ರಮವಾಗಿ ಇರಿಸಿಲ್ಲ ಎನ್ನುವುದು ಅಲ್ಲಿನ ವಾಸಿಗಳೇ ಖುದ್ದು ನೀಡಿರುವ ಹೇಳಿಕೆಯಿಂದ ಖಚಿತವಾಗಿದೆ. ಅಕ್ರಮವಾಗಿ ಇರಿಸಿರುವ ಬಗ್ಗೆ ಪೂರಕ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಪ್ರಕರಣ ವಜಾಗೊಳಿಸಲಾಗಿದೆ ಎಂದು ಆದೇಶ ತಿಳಿಸಿದೆ.
ನನ್ನ ಹಿರಿಯ ಮಕಳು ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಪಿಜಿ ಪದವಿ ಪಡೆದಿದ್ದು, ಕಿರಿಯ ಪುತ್ರಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾಳೆ. ಇಬ್ಬರೂ ಯೋಗ ತರಗತಿಗಳಿಗೆ ಹೋದಾಗ ಬ್ರೈನ್ ವಾಶ್ ಮಾಡಿ ಇಶಾ ಫೌಂಡೇಶನ್ ಇರಿಸಿಕೊಂಡಿದೆ. ಅವರ ತಲೆಯನ್ನು ಕೆಡಿಸಿ ಮಾನಸಿಕವಾಗಿ ನಿಯಂತ್ರಿಸುವ ಮೂಲಕ ಸನ್ಯಾಸಿಗಳನ್ನಾಗಿ ಮಾಡಲಾಗಿದೆ. ನಾವು ಅವರನ್ನು ಸಂಪರ್ಕಿಸದಂತೆ ಮಾಡಲಾಗಿದೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದರು.