ಒಂಟಿಯಾಗಿ ಹೆಚ್ಚು ಟ್ರಾವೆಲ್‌ ಮಾಡ್ತೀರಾ? ಹಾಗಿದ್ರೆ ಹೀಗಿರಲಿ ನಿಮ್ಮ ಸೇಫ್ಟಿ ಸ್ಟೆಪ್ಸ್‌ …

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈಗೆಲ್ಲ ಹೆಣ್ಣು ಮಕ್ಕಳಿಗೆ ಸೋಲೋ ಟ್ರಿಪ್‌ ಗಳೆಂದರೆ ತುಂಬಾ ಇಷ್ಟ. ಒಬ್ಬರೇ ದೂರದ ದೇಶಗಳಿಗೂ ಟ್ರಾವೆಲ್ ಮಾಡ್ತಾರೆ. ಆದರೆ ಈ ರೀತಿ ಹೆಚ್ಚು ಒಬ್ಬರೇ ಟ್ರಿಪ್‌ ಹೋಗುವಾಗ ನೆನಪಿಡಬೇಕಾದ ಕೆಲವು ಅಂಶಗಳು ಇಲ್ಲಿವೆ…

  • ನೀವು ಹೋಗುವ ಊರಿನ ಬಗ್ಗೆ ಹೆಚ್ಚು ತಿಳಿಯಿರಿ.
  • ಅಲ್ಲಿ ನಿಮಗೆ ಸುರಕ್ಷತೆ ಕೊಡುವ ಒಂದೊಳ್ಳೆ ಹೋಟೆಲ್‌ ಆಯ್ಕೆ ಮಾಡಿ.
  • ಮುಂಚಿತವಾಗಿಯೇ ಅಲ್ಲಿ ಯಾರಾದ್ರು ಪರಿಚಿತರಿದ್ದರೆ ಕರೆ ಮಾಡಿ ಮಾತನಾಡಿಸಿ.
  • ಗ್ರೌಂಡ್‌ ಫ್ಲೋರ್‌ ನಲ್ಲಿ ರೂಮ್ ಆಯ್ಕೆ ಮಾಡಬೇಡಿ. ಎಲ್ಲರಿಗೂ ನಿಮ್ಮ ಮೇಲೆ ಕಣ್ಣಿರುತ್ತೆ.
  • ನಿಮ್ಮ ರೂಂ ನಂಬರ್‌ ಅನ್ನು ಬಾಯಲ್ಲಿ ಹೇಳೋಕಿಂತ ಬರೆದು ಪಡೆಯೋದು ಒಳ್ಳೆಯದ್ದು.
  • ನಿಮ್ಮ ಲಗೇಜ್‌ ಸದಾ ನಿಮ್ಮ ಜತೆಗಿರಲಿ.
  • ರೂಮ್‌ ಅನ್ನು ಒಮ್ಮೆ ಚೆಕ್‌ ಮಾಡಿಕೊಳ್ಳಿ. ಯಾವುದೇ ಕ್ಯಾಮರಾ, ಅನುಮಾನಾಸ್ಪದ ವಸ್ತುಗಳು ಇವೆಯಾ ಗಮನಿಸಿ.
  • ರೂಮ್‌ ಬಾಗಿಲು ಯಾವಾಗಲೂ ಲಾಕ್‌ ಮಾಡಿರಿ.
  • ಹೋಟೆಲ್‌ ನ ಮೇನ್‌ ಎಂಟರೆನ್ಸ್‌ ಬಳಸಿ.
  • ಕಾರ್‌, ದ್ವಿ ಚಕ್ರವಾಹನ ಪಾರ್ಕಿಂಗ್‌ ಸೇಫಾಗಿರಲಿ
  • ನೀವು ಎಲ್ಲಿಗೆ ಹೋಗಬೇಕು ಅನ್ನೋದನ್ನ ಅಪರಿಚಿತರಿಗೆ ಹೇಳಬೇಡಿ.
  • ಮೊಬೈಲ್‌ ಸದಾ ಜತೆಗಿರಲಿ.
- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!