ಭಾರತದ ಫೈಟರ್ ಜೆಟ್ ಇಂಜಿನ್‌ಗಳ ಅಭಿವೃದ್ಧಿಗೆ ತಂತ್ರಜ್ಞಾನ ಹಂಚಿಕೊಳ್ಳಲು ಸಫ್ರಾನ್‌ ಸಿದ್ಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರನ್‌ ಆಗಮಿಸಿದ್ದು, ಈ ವೇಳೆ ಭಾರತದಲ್ಲಿ ಫೈಟರ್ ಜೆಟ್ ಇಂಜಿನ್‌ಗಳ ಅಭಿವೃದ್ಧಿಗೆ ತಂತ್ರಜ್ಞಾನವನ್ನು ಸಹಯೋಗಿಸಲು ಮತ್ತು ಹಂಚಿಕೊಳ್ಳಲು ಸಫ್ರಾನ್‌ ಸಿದ್ಧವಿದೆ ಎಂದು ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರಿ ಜಾವೇದ್ ಅಶ್ರಫ್ ಹೇಳಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಜೈಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರ ನಡುವಿನ ಮಾತುಕತೆಯ ಪ್ರಮುಖ ವಿವರಗಳನ್ನು ತಿಳಿಸಿದರು.

ಭಾರತದ ಟಾಟಾ ಸಮೂಹ ಮತ್ತು ಫ್ರಾನ್ಸ್‌ನ ಏರ್‌ಬಸ್ ನಾಗರಿಕ ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಅದರೊಂದಿಗೆ ಸ್ಥಳೀಯ ಉತ್ಪನ್ನ ಮತ್ತು ಸ್ಥಳೀಕರಣ ಘಟಕವನ್ನು ಇದು ಹೊಂದಿರಲಿದೆ ಎಂದಿದ್ದರು. ಇದರೊಂದಿಗೆ ಜೆಟ್‌ ಇಂಜಿನ್‌ ಉತ್ಪಾದಕ ದೈತ್ಯ ಕಂಪನಿಯಾದ ಸಫ್ರಾನ್‌ ಭಾರತದೊಂದಿಗೆ ಈ ತಂತ್ರಜ್ಞಾನ ಹಂಚಿಕೊಳ್ಳಲು ಸಿದ್ಧವಿರುವುದಾಗಿ ಘೋಷಣೆ ಮಾಡಿದೆ.

ಭಾರತ ಮತ್ತು ಫ್ರಾನ್ಸ್ ರಕ್ಷಣಾ-ಕೈಗಾರಿಕಾ ಪಾಲುದಾರಿಕೆಯ ಮಾರ್ಗಸೂಚಿ ದೃಢವಾಗಿದೆ . ಇದು ಪ್ರಮುಖ ಮಿಲಿಟರಿ ಹಾರ್ಡ್‌ವೇರ್ ಮತ್ತು ಪ್ಲಾಟ್‌ಫಾರ್ಮ್‌ಗಳ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯನ್ನು ಒದಗಿಸುತ್ತದೆ ಮತ್ತು ಬಾಹ್ಯಾಕಾಶ, ಭೂ ಯುದ್ಧ, ಸೈಬರ್‌ಸ್ಪೇಸ್ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಂತ್ರಜ್ಞಾನ ಸಹಯೋಗವನ್ನು ಸುಗಮಗೊಳಿಸುತ್ತದೆ ಎಂದು ಅವರು ಹೇಳಿದರು.

ರಕ್ಷಣೆ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶದಲ್ಲಿ ಸಹಕಾರವನ್ನು ಗಾಢಗೊಳಿಸುವ 25 ವರ್ಷಗಳ ಯೋಜನೆಯೊಂದಿಗೆ ಫ್ರಾನ್ಸ್ ಮತ್ತು ಭಾರತದ ನಡುವಿನ ಸಂಬಂಧಗಳು ಬಲಗೊಂಡಿವೆ.

ಕಳೆದ ವರ್ಷ ಫ್ರಾನ್ಸ್‌ನಲ್ಲಿ ನಡೆದ ಬಾಸ್ಟಿಲ್ ಡೇ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿತ್ತು, ಫ್ರಾನ್ಸ್‌ನ ನೇವಲ್ ಗ್ರೂಪ್‌ನಿಂದ ಹೆಚ್ಚುವರಿ ಜಲಾಂತರ್ಗಾಮಿ ನೌಕೆಗಳನ್ನು ಮತ್ತು ಡಸಾಲ್ಟ್ ಏವಿಯೇಷನ್ ಎಸ್‌ಎಯಿಂದ 26 ಸಾಗರ ರಫೇಲ್ ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಗಳನ್ನು ಅನಾವರಣಗೊಳಿಸಲಾಯಿತು.

ಪ್ರಸ್ತುತ ಭಾರತದ ತಯಾರಿಸುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಯ ಮೂಲ ತಂತ್ರಜ್ಞಾನ ರಷ್ಯಾ ದೇಶದ್ದು. ಭಾರತದ ಜೊತೆಗಿನ ಒಪ್ಪಂದದ ಬಳಿಕ ಈ ಕ್ಷಿಪಣಿ ತಂತ್ರಜ್ಞಾನವನ್ನು ರಷ್ಯಾ ಭಾರತದ ಜೊತೆ ಹಂಚಿಕೊಂಡಿತ್ತು. ಇದರಿಂದ ಭಾರತವೇ ಈಗ ತನ್ನ ಬ್ರಹ್ಮೋಸ್‌ ಕ್ಷಿಪಣಿಯನ್ನು ಅಭಿವೃದ್ಧಿ ಮಾಡುತ್ತಿದೆ. ಹಾಗೇನಾದರೂ ಸಫ್ರಾನ್‌ ತನ್ನ ತಂತ್ರಜ್ಞಾನ ಹಂಚಿಕೊಳ್ಳಲು ಮುಂದಾದರೆ, ಜೆಟ್‌ ಇಂಜಿನ್‌ ಅಭಿವೃದ್ಧಿಯಲ್ಲೂ ಭಾರತ ಸ್ವಾವಲಂಬಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!