ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಹಾರಾ ಇಂಡಿಯಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ (75) ನಿಧನರಾಗಿದ್ದಾರೆ.
ದೀರ್ಘಕಾಲದಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮೆಟಬಾಲಿಕ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೃದಯಸ್ತಂಭನದಿಂದ ಮಂಗಳವಾರ ರಾತ್ರಿ ಮುಂಬೈನಲ್ಲಿ ವಿಧಿವಶರಾಗಿದ್ದಾರೆ.
ಆರೋಗ್ಯ ಹದಗೆಟ್ಟ ಹಿನ್ನೆಲೆ ಅವರನ್ನು ನವೆಂಬರ್ 12 ರಂದು ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನ.14ರಂದು ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.
ಜೂನ್ 10, 1948 ರಂದು ಜನಿಸಿದ ಸುಬ್ರತಾ ರಾಯ್ ಅವರು ಭಾರತದ ಪ್ರಮುಖ ಉದ್ಯಮಿ ಮತ್ತು ಸಹಾರಾ ಇಂಡಿಯಾ ಗ್ರೂಪ್ ನ ಸ್ಥಾಪಕರಾಗಿದ್ದರು. ಅವರ ನಿಧನಕ್ಕೆ ಸಹಾರಾ ಕಂಪನಿ ಸಂತಾಪ ಸೂಚಿಸಿದೆ.