ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಠ್ಯ ಪರಿಷ್ಕರಣೆ ಬಗ್ಗೆ ಮಾತನಾಡಿದ ಸಾಹಿತಿ ಬಂಜಗೆರೆ ಜಯಪ್ರಕಾಶ್‌ಗೆ ಕೊಲೆ ಬೆದರಿಕೆ ಪತ್ರ ಬಂದಿದೆ.
ಪಠ್ಯ ಪರಿಷ್ಕರಣೆ ಬಗ್ಗೆ ಮಾತನಾಡಿದಾಗಿನಿಂದ ಸಾಕಷ್ಟು ಬೆದರಿಕೆ ಪತ್ರಗಳು ಬರುತ್ತಿದ್ದು, ಈ ಪತ್ರದಲ್ಲಿ ನಿನ್ನ ಅಂತ್ಯ ನಿಶ್ಚಿತ ಎಂದು ಪತ್ರದಲ್ಲಿ ಬರೆಯಲಾಗಿದೆ.
ಪತ್ರದಲ್ಲೇನಿದೆ?
ಕರ್ನಾಟಕ ರಾಜ್ಯದಲ್ಲಿ ಕಂಪನ ಆಡಳಿತ ಪ್ರಾರಂಭ. ಹಿಂದೂ ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ. ನಿಮ್ಮಂತಹವರಿಗೆ, ದುರ್ಜನ ದೇಶ ದ್ರೋಹಿಗಳಿಗೆ, ಮತಾಂಧ, ಮುಸ್ಲಿಂ, ಮತಾಂತರ ಕ್ರೈಸ್ತರಿಗೆ ಪ್ರಿಯ ಸರ್ಕಾರ. ನಿಮ್ಮ ಜೀವ ಎಂಬ ಅಜ್ಞಾನದ ದೀಪ ಆರುವುದು ನಿಶ್ಚಿತ. ಬಂಜಗೆರೆ ಜಯಪ್ರಕಾಶ್ ನಿನ್ನ ಅಂತ್ಯ ನಿಶ್ಚಿತ ಎಂದು ಬರೆಯಲಾಗಿದೆ.
ಜಯಪ್ರಕಾಶ್ ಅವರು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.