ಸಾಹಿತ್ಯ ಸಮ್ಮೇಳ: ಸರಕಾರದ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಬೇಸರ

ಹೊಸದಿಗಂತ ವರದಿ, ಹಾವೇರಿ:

ಸಮ್ಮೇಳನದ ಲಾಂಛನ ಬಿಡುಗಡೆ ಆಗಿಲ್ಲ, ಸಮಿತಿಗಳ ರಚನೆ ಆಗಿಲ್ಲ. ಪ್ರತಿನಿಧಿಗಳ ನೋಂದಣಿ ಆಗಬೇಕು, ಈವರೆಗೂ ಅದು ಆಗಿಲ್ಲ. ಮಳಿಗೆಗಳು ಆಗಬೇಕು. ನನಗೆ ಬಹಳ ದುಃಖ, ಬೇಸರ ಆಗಿದೆ. ನಮಗೆ ಅನಿಶ್ಚಿತತೆ ಕಾಡ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಬೇಸರ ವ್ಯಕ್ತಪಡಿಸಿದರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ನವೆಂಬರ್ ೧೧,೧೨ ಮತ್ತು ೧೩ರಂದು ಆಯೋಜಿಸಲು ದಿನಾಂಕ ಘೋಷಣೆಯಾಗಿತ್ತು. ಆದರೆ ಇಂದಿನವರೆಗೂ ಯಾವುದೇ ಕಾರ್ಯಚುವಟಿಕೆಗಳು ಜರಗುತ್ತಿಲ್ಲ. ಸಮ್ಮೇಳನ ಆಯೋಜನೆ ಕುರಿತು ನಾವು ಈವರೆಗೆ ಸರಕಾರಕ್ಕೆ ಸಾಕಷ್ಟು ಕಾಗದಗಳನ್ನು ಬರೆದಿರುವೆ. ಕಾಗದಗಳನ್ನು ಬರೆದರೆ ಯಾರೋ ಒಬ್ಬ ಅಂಡರ್ ಸೆಕ್ರೆಟರಿ ಉತ್ತರ ಕೊಡುತ್ತಾರೆ. ಈ ರೀತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗಾದರೆ ಬಹಳ ಬೇಸರ ಆಗುತ್ತಿದೆ. ನಾನು ಯಾರನ್ನೂ ದೂಷಿಸ್ತಿಲ್ಲ ಎಂದರು.
ನಾನು ಮಹೇಶ ಜೋಷಿಯಾಗಿ ಏನನ್ನೂ ಕೇಳ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕೇಳ್ತಿದ್ದೇನೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಸಮ್ಮೇಳನದ ಬಗ್ಗೆ ನನಗೆ ನಿಶ್ಚಿತತೆ ಇಲ್ಲದಾಗಿದೆ. ಬಜೆಟ್‌ನಲ್ಲಿ ಇಪ್ಪತ್ತು ಕೋಟಿ ಕೊಟ್ಟಿದ್ದೇವೆ ಅಂದರು. ಇವತ್ತಿನವರೆಗೂ ಜಿಲ್ಲಾಡಳಿತಕ್ಕೆ ಒಂದು ಪೈಸೆಯೂ ಬಂದಿಲ್ಲ. ಮುಖ್ಯಮಂತ್ರಿಗಳ ಮನೆ ಕಾಯುವ ಕಸಾಪ ಅಧ್ಯಕ್ಷ ನಾನಲ್ಲ. ಕನ್ನಡಿಗರ ಸ್ವಾಭಿಮಾನ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ದಿನಾಂಕ ಮುಂದೂಡ್ತೀವಿ ಅಂತಾರೆ. ಮುಖ್ಯಮಂತ್ರಿಗಳು ಸಮ್ಮೇಳನ ನಿಗದಿತ ದಿನಾಂಕಕ್ಕೆ ಮಾಡೇ ಮಾಡ್ತೀವಿ ಅಂತಾರೆ. ಯಾರದಾರು ಒಬ್ಬ ಅಧಿಕಾರಿ ಅಥವಾ ಮಂತ್ರಿ ನೇಮಕ ಮಾಡುವಂತೆ ನಾನು ಸಿಎಂ ಅವರಿಗೆ ಹೇಳಿದ್ದೇನೆ ಎಂದರು.
ನಾಲ್ಕು ಬಾರಿ ಸಭೆಗಳನ್ನು ನಿಗದಿ ಮಾಡಿದರು. ನಾಲ್ಕು ಬಾರಿ ಸಭೆಗಳನ್ನು ಕ್ಯಾನ್ಸಲ್ ಮಾಡಿದರು.
ಇದು ಸಾಹಿತ್ಯ ಪರಿಷತ್ತಿನ ದೌರ್ಭಾಗ್ಯ. ಸಮ್ಮೇಳನ ಖಂಡಿತವಾಗಿ ನಡೆಯುತ್ತೆ, ಐತಿಹಾಸಿಕ ಸಮ್ಮೇಳನ ಮಾಡಬೇಕು ಅನ್ನೋ ಉತ್ಸಾಹವಿದೆ. ಸಮ್ಮೇಳನ ಯಾವಾಗ ನಡೆಯುತ್ತೆ ಅನ್ನೋದನ್ನು ನಾನೂ ಮೂಖನಾಗಿ ನೋಡಬೇಕಾಗಿದೆ ಎಂದು ಬೇಸರಿಸಿದರು.
ಸಮ್ಮೇಳನದ ದಿನಾಂಕ ಮತ್ತು ಸ್ಥಳದ ಕುರಿತ ಬೆಳವಣಿಗೆಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ ಬೇಸರ ತರಿಸಿದೆ. ಎಲ್ಲ ಕಡೆಗಳಲ್ಲಿ ಬಹಳ ವ್ಯವಸ್ಥಿತವಾಗಿ ಸಮ್ಮೇಳನಗಳು ನಡೆದಿವೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ದಿನಾಂಕ ಘೋಷಣೆ ಮಾಡುವುದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ. ಸರಕಾರ, ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕೂಡಿ ಮಾಡಬೇಕಾದ ಸಮ್ಮೇಳನವಾಗಬೇಕು ಎಂದರು.
೮೬ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವದಲ್ಲಿ ಹಾವೇರಿಯಲ್ಲಿ ಕನ್ನಡ ಭವನ ನಿರ್ಮಾಣ. ಸಮ್ಮೇಳನದ ನಂತರ ಪಾದಯಾತ್ರೆ ಮಾಡಿ ಹಣ ಸಂಗ್ರಹಿಸಿ ಐತಿಹಾಸಿಕ ಕಟ್ಟಡ ನಿರ್ಮಾಣ ಆಗಬೇಕು. ಜನಸಾಮಾನ್ಯರ ಕಟ್ಟಡ ಆಗಬೇಕು ಅನ್ನೋ ಕಾರಣಕ್ಕೆ ಜನರಿಂದ ಹಣ ಸಂಗ್ರಹ. ನಿಗದಿತ ದಿನಾಂಕದಲ್ಲಿ ಎಲ್ಲಿ ಆಗುತ್ತೆ. ಸಮ್ಮೇಳನ ನಡೆಸಲು ಆಸಕ್ತಿ ಇದೆಯೋ ಇಲ್ಲವೋ ಎಂಬುದನ್ನು ಸಿಎಂ ಅವರನ್ನೆ ನೀವು ಕೇಳಬೇಕು. ಹೆಜ್ಜೆ ಹೆಜ್ಜೆಯಲ್ಲೂ ನಮಗೆ ಸಹಕಾರ ಸಿಗ್ತಿಲ್ಲ. ಇದು ಸಾಹಿತ್ಯ ಪರಿಷತ್ತಿಗೆ ಆಗಬಾರ್ದು. ಸಾಹಿತ್ಯ ಪರಿಷತ್ತಿಗೆ ಎಲ್ಲೆಲ್ಲಿ ಅಪಮಾನ ಆಗಿದೆ ಅದನ್ನು ಸರಿಪಡಿಸಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!