ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಹಜ ಸುಂದರಿ, ನಟಿ ಸಾಯಿ ಪಲ್ಲವಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಯಾವ ಬಾರಿಯೂ ಪರ್ಸನಲ್ ವಿಷಯಗಳಿಗೆ ಸುದ್ದಿಯಾಗದ ನಟಿ ಇದೀಗ ತಮ್ಮ ಪರ್ಸನಲ್ ವಿಷಯಕ್ಕೆ ಸುದ್ದಿಯಾಗಿದ್ದಾರೆ.
ಸಾಯಿ ಪಲ್ಲವಿ ತಮ್ಮ ಸಹನಟನ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ವಿಷಯ ಎಲ್ಲೆಡೆ ವೈರಲ್ ಆಗಿದೆ. ಸಹನಟನ ಜೊತೆ ಡೇಟಿಂಗ್ ಮಾಡೋದು ಮಾಮೂಲಿ ವಿಷಯ ಆದರೆ ಈ ನಟನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ, ಅಲ್ಲದೆ ಈ ನಟ ಯಾರು ಎನ್ನುವ ವಿಷಯವೂ ಹೊರಬಿದ್ದಿಲ್ಲ.