ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಯಿ ಸುದರ್ಶನ್ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ 196 ರನ್ ಗಳಿಸಿ ಮುಂಬೈ ಗೆ ಸವಾಲಿನ ಗುರಿ ನೀಡಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಸಾಯಿ ಸುದರ್ಶನ್ 41 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 61 ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ ಶುಭ್ಮನ್ ಗಿಲ್ (38) , ಜೋಸ್ ಬಟ್ಲರ್ (29) ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ನಂತರ ಬಂದ ಶಾರುಖ್ ಖಾನ್ ಕೇವಲ 9 ರನ್ಗಳಿಸಿ ಔಟ್ ಆದರು. ಸಾಯಿ ಸುದರ್ಶನ್ 41 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 63 ರನ್ಗಳಿಸಿದರು.ಬಳಿಕ ಶೆರ್ಫೇನ್ ರುದರ್ಫೋರ್ಡ್ 18 ರನ್ಗಳಿಸಿ ಔಟ್ ಆದರೆ, ತೆವಾಟಿಯಾ ಖಾತೆ ತೆರೆಯದೇ ರನ್ಔಟ್ ಆಗಿ ಮರಳಿದರು. ರಶೀದ್ ಖಾನ್ 6 ಹಾಗೂ ಕಗಿಸೋ ರಬಾಡ 7 ರನ್ಗಳಿಸಿದರು.
ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ 29 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಟ್ರೆಂಟ್ ಬೌಲ್ಟ್ 34ಕ್ಕೆ1, ದೀಪಕ್ ಚಾಹರ್ 39ಕ್ಕೆ1, ಮುಜೀಬ್ ಉರ್ ರೆಹಮಾನ್ 28ಕ್ಕೆ1, ಎಸ್ ರಾಜು 40ಕ್ಕೆ1 ವಿಕೆಟ್ ಪಡೆದು ಮಿಂಚಿದರು.