ಆಸ್ಪತ್ರೆಯಿಂದ ಸೈಫ್​ ಅಲಿ ಖಾನ್​ ಡಿಸ್‌ಚಾರ್ಜ್‌: ತನಗೆ ಏನಾಯ್ತು ಎಂದ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಅವರು ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ.

ಸೋಮವಾರ ಬೆಳಿಗ್ಗೆ ಸುಮಾರು 8 ಗಂಟೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಧಿಕೃತವಾಗಿ ಅವರು ಮಾಹಿತಿ ನೀಡಿರಲಿಲ್ಲ. ಆದರೆ ವಿಷಯ ತಿಳಿಯುತ್ತಿದ್ದಂತೆಯೇ ​ ಅಭಿಮಾನಿಗಳು ಆತಂಕಗೊಂಡಿದ್ದರು.
ನಟನ ಭುಜದಲ್ಲೂ ಮೂಳೆ ಮುರಿತವಾಗಿದೆ, ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದೇ ಎಲ್ಲೆಡೆ ವರದಿಯಾಗಿತ್ತು. ಆದರೆ ನಿಜಾಂಶ ಮಾತ್ರ ಎಲ್ಲಿಯೂ ಬಹಿರಂಗವಾಗಿರಲಿಲ್ಲ.

ಇದೀಗ ನಟ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿ ಹೊರಗೆ ಬಂದಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ. ಇದೀಗ ತಮಗೆ ಏನಗಿತ್ತು ಎಂದು ನಟ ಹೇಳಿದ್ದಾರೆ. ನನ್ನ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ನೋಡಿ ಆಶ್ಚರ್ಯವಾಯಿತು. ನನಗೆ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಲಾಗಿಲ್ಲ ಅಥವಾ ನನ್ನ ಬೆನ್ನು ಮೂಳೆಯೂ ಮುರಿದಿಲ್ಲ. ಆದರೆ ಆ ಕ್ಷಣದಲ್ಲಿ ಏನಾಯಿತು ಎಂದು ನನಗೂ ಸರಿಯಾಗಿ ಗೊತ್ತಿಲ್ಲ. ಭುಜದಲ್ಲಿ ವಿಪರೀತ ನೋವಿತ್ತು ಅಷ್ಟೇ. ನಾನು ಬಹಳ ಸಮಯದಿಂದ ಅದರಲ್ಲಿ ನೋವು ಅನುಭವಿಸುತ್ತಿದ್ದೆ. ಕೆಲವೊಮ್ಮೆ ನೋವು ಅಸಹನೀಯವಾಗುತ್ತಿತ್ತು. ಇದಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದೆ ಎಂದಿದ್ದಾರೆ.

ನನಗೆ ಈ ಸಮಸ್ಯೆ ಬಹಳ ದಿನಗಳಿಂದ ಇದೆ. ಆದರೆ ಇದು ಎಷ್ಟು ಗಂಭೀರವಾಗಿದೆ ಎಂದು ನನಗೂ ನಿಜವಾಗಿ ತಿಳಿದಿಲ್ಲ. ನಿನ್ನೆ ಕೂಡ ಏನು ಆಯಿತು ಎಂದು ಸರಿಯಾಗಿ ಗೊತ್ತಿಲ್ಲ. ಆದರೆ ನೋವು ಹೆಚ್ಚಾಯಿತು. ದೇವಾರ ಚಿತ್ರಕ್ಕೆ ಆ್ಯಕ್ಷನ್ ಸೀಕ್ವೆನ್ಸ್ ಮಾಡುವಾಗ ನನಗೆ ತೀವ್ರ ಪೆಟ್ಟಾಗಿತ್ತು. ಆಗ ನನ್ನ ಗಮನಕ್ಕೆ ಬಂದಿರಲಿಲ್ಲ. ಎಲ್ಲವೂ ಸರಿಯಾಗಿದೆ ಎಂದು ನಾನು ಭಾವಿಸಿದೆ. ಹೇಗೋ ಕೆಲಸ ನಡೆಯುತ್ತಿತ್ತು. ನಾನು ಕೆಲಸ ಮಾಡುತ್ತಿದ್ದಾಗ ನೋವು ಹೆಚ್ಚಾಗುತ್ತಿತ್ತು. ನಾನು ಶ್ರಮದಾಯಕವಾಗಿ ಏನಾದರೂ ಮಾಡಿದರೆ, ಅದು ನೋವುಂಟುಮಾಡುತ್ತದೆ. ರಾವಣನ ಪಾತ್ರಕ್ಕೆ action ಮಾಡುವಾಗಲೂ ಕಷ್ಟವಾಗಿತ್ತು. ಹಾಗಾಗಿ ಎಂಆರ್‌ಐ ಮಾಡಿಸಲು ಯೋಚಿಸಿದ್ದೆ, ಅದಕ್ಕಾಗಿ ದಾಖಲಾಗಿದ್ದೆ ಅಷ್ಟೇ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!