ಸೈಫ್‌ ಅಲಿ ಖಾನ್‌ ಆಸ್ಪತ್ರೆ ಬಿಲ್‌ ಫೋಟೊ ಲೀಕ್‌, 25 ಲಕ್ಷ ರೂ. ಕಟ್ಟಿದ್ಯಾ ಇನ್ಶೂರೆನ್ಸ್‌ ಕಂಪನಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಸೈಫ್ ಅಲಿ ಖಾನ್ ಅವರು ಸದ್ಯ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ಗೊತ್ತೇ ಇದೆ. ಕಳ್ಳನೊಬ್ಬ ಇವರ ಮನೆಗೆ ನುಗ್ಗಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಅಲ್ಲದೆ, ಸೈಫ್ ಮೇಲೆ ಹಲ್ಲೆ ಮಾಡಿ ಹೋಗಿದ್ದ. ಸೈಫ್ ಅಲಿ ಖಾನ್ ಅವರ ಬೆನ್ನಿಗೆ ಇದರಿಂದ ಸಾಕಷ್ಟು ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದರ ಬಿಲ್ ಒಂದು ಈಗ ವೈರಲ್ ಆಗಿದೆ.

ಜನವರು 16ರಂದು ಸೈಫ್ ಅಲಿ ಖಾನ್ ಅವರು ಆಸ್ಪತ್ರೆ ಸೇರಿದರು. ಅವರನ್ನು ರಿಕ್ಷಾ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಮಗನಾದ ಇಬ್ರಾಹಿಮ್ ಅವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ಬಳಿಕ ಅವರಿಗೆ ವೈದ್ಯರು ಸರ್ಜರಿ ಮಾಡಿದ್ದಾರೆ. ಸೈಫ್ ಬೆನ್ನಿನ ಭಾಗದಲ್ಲಿ ಹೊಕ್ಕಿದ್ದ ಚಾಕುವಿನ ಚೂರನ್ನು ತೆಗೆಯಲಾಗಿದೆ. ಸೈಫ್ ಅಲಿ ಖಾನ್ ಅವರ ಆಸ್ಪತ್ರೆ ಬಿಲ್ 35.95 ಲಕ್ಷ ರೂಪಾಯಿ ಖರ್ಚಾಗಿದೆ. ಇನ್ಸೂರೆನ್ಸ್ ಕಂಪನಿ ಕಡೆಯಿಂದ 25 ಲಕ್ಷ ರೂಪಾಯಿ ಸಿಕ್ಕಿದೆ ಎಂದು ವರದಿ ಆಗಿದೆ.

ಗುರುವಾರ ಮುಂಜಾನೆ 2.30 ಸುಮಾರಿಗೆ ವ್ಯಕ್ತಿಯೋರ್ವ ಸೈಫ್ ಮನೆಗೆ ನುಗ್ಗಿದ್ದ. ಮನೆ ಕೆಲಸದವಳ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಗಲಾಟೆ ಕೇಳಿ ಬಂದ ಸೈಫ್ ಅಲಿ ಖಾನ್ ಅವರ ಮೇಲೆ ಈತ ಹಲ್ಲೆ ಮಾಡಿದ್ದಾನೆ. ಆರು ಕಡೆಗಳಲ್ಲಿ ಸೈಫ್ ಮೇಲೆ ದಾಳಿ ನಡೆದಿದೆ. ಈಗ ಅವರು ಡೇಂಜರ್​ಜೋನ್​ನಿಂದ ಹೊರ ಬಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

  1. ಶ್ರೀಮಂತರ ಬಿಲ್ ಬೇಗ ಆಗುತ್ತೆ.ನಮ್ಮಂಥವರ ಬಿಲ್ ದೇವರೇ ಗತಿ

LEAVE A REPLY

Please enter your comment!
Please enter your name here

error: Content is protected !!