ಹೊಸದಿಗಂತ ಡಿಜಿಟಲ್ ಡೆಸ್ಕ್:
ದೊಡ್ಡ ಮನೆ ಹತ್ತಿರ ಯಾರೋ ಮೂರು ಜನ ಆಟೋ ಆಟೋ ಎಂದು ಕೂಗುತ್ತಿದ್ದರು. ನಾನು ಗಾಡಿ ನಿಲ್ಲಿಸಿದೆ. ಬಿಳಿ ಕುರ್ತಾ ಹಾಕಿದ್ದ ವ್ಯಕ್ತಿ ಆಟೋದಲ್ಲಿ ಕುಳಿತರು, ಜೊತೆಗೆ ಹುಡುಗನೊಬ್ಬ ಇದ್ದ. ರಕ್ತದಿಂದ ಕುರ್ತಾ ಕೆಂಪಾಗಿತ್ತು. ಒಂದು ರೂಪಾಯಿ ಅಂತಲೂ ಕೇಳದೆ ಆಸ್ಪತ್ರೆ ಸೇರಿಸಿದೆ ಎಂದು ಸೈಫ್ ಅಲಿ ಖಾನ್‌ರನ್ನು ಆಸ್ಪತ್ರೆ ತಲುಪಿಸಿದ ಆಟೋ ಚಾಲಕ ಹೇಳಿದ್ದಾರೆ.
ಆಸ್ಪತ್ರೆ ತಲುಪಿದ ಮೇಲೆ ವ್ಯಕ್ತಿ ನಾನು ಸೈಫ್ ಅಲಿ ಖಾನ್, ಪ್ಲೀಸ್ ಸ್ಟ್ರೆಚರ್ ತಿನ್ನಿ ಎಂದು ಗಾರ್ಡ್‌ಗೆ ಜೋರಾಗಿ ಹೇಳಿದ್ರು. ಆಗಲೇ ನನಗೆ ಅವರು ನಟ ಅಂತ ಗೊತ್ತಾಗಿದ್ದು ಎಂದು ಆಟೋ ಚಾಲಕ ಭಜನ್ ಸಿಂಗ್ ರಾಣಾ ಹೇಳಿದ್ದಾರೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಟೋ ಆಸ್ಪತ್ರೆಗೆ ತಲುಪಿತು. ಅವರ ಮನೆಯಿಂದ ಏಳೆಂಟು ನಿಮಿಷಗಳಲ್ಲಿ ಆಸ್ಪತ್ರೆ ತಲುಪಿದೆವು. ನಂತರ ಅವರಿಂದ ಹಣ ತೆಗೆದುಕೊಳ್ಳಲಿಲ್ಲ. ಅವರು ತಮ್ಮ ಮಗನ ಜೊತೆ ಮಾತನಾಡುತ್ತಾ ಇದ್ದರು ಎಂದು ಆಟೋ ಚಾಲಕ ಹೇಳಿದ್ದಾರೆ.