ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಕು ಇರಿತಕ್ಕೆ ಒಳಗಾಗಿರುವ ನಟ ಸೈಫ್ ಅಲಿ ಖಾನ್‌ರನ್ನು ಭೇಟಿ ಮಾಡಲು ನಟ ಶಾರುಖ್ ಆಸ್ಪತ್ರೆಗೆ ಆಗಮಿಸಿದ್ದಾರೆ.
ಸೈಫ್ ಹಾಗೂ ಶಾರುಖ್ ಉತ್ತಮ ಸ್ನೇಹಿತರಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಶಾರುಖ್ ಶೂಟ್ ನಿಲ್ಲಿಸಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಆಗಮಿಸಿದ್ದಾರೆ.
ಶಾರುಖ್ ಖಾನ್ ಅವರು ತಮ್ಮ ರೋಲ್ಸ್ ರಾಯ್ಸ್ನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಅವರು ಶಸ್ತ್ರಚಿಕಿತ್ಸೆಯ ಅಪ್ಡೇಟ್ ಪಡೆದಿದ್ದಾರೆ. ಅವರು ಕರೀನಾ ಹಾಗೂ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಶಾರುಖ್ ಖಾನ್ ಹಾಗೂ ಸೈಫ್ ಅಲಿ ಖಾನ್ ‘ಕಲ್ ಹೋ ನ ಹೋ’ ಚಿತ್ರದಲ್ಲಿ ನಟಿಸಿದ್ದರು. ‘ಕಭಿ ಖುಷಿ ಕಭಿ ಗಮ್’ ಹಾಗೂ ‘ಅಶೋಕ’ ಸಿನಿಮಾದಲ್ಲಿ ಶಾರುಖ್ ಅವರು ಕರೀನಾ ಜೊತೆ ತೆರೆ ಹಂಚಿಕೊಂಡಿದ್ದರು. ಹೀಗಾಗಿ, ಈ ಕುಟುಂಬದ ಜೊತೆ ಶಾರುಖ್ಗೆ ಒಳ್ಳೆಯ ಒಡನಾಟ ಇದೆ.