ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸೈಫ್ ಅಲಿ ಖಾನ್‌ಗೆ ದರೋಡೆಕೋರರು ಚಾಕು ಇರಿದಿದ್ದು, ಸದ್ಯ ನಟನಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ.
ಬೆನ್ನಿನ ಭಾಗಕ್ಕೆ ಚಾಕು ಇರಿದಿದ್ದು, ಶಸ್ತ್ರಚಿಕಿತ್ಸೆ ವೇಳೆ ಚಾಕುವಿನ ಚೂರು ದೇಹದಲ್ಲಿ ಸಿಕ್ಕಿದೆ. ಇದನ್ನು ಹೊರತೆಗೆದಿದ್ದು, ಕಾಸ್ಮೆಟಿಕ್ ಸರ್ಜರಿ ಮಾಡಲಾಗುತ್ತಿದೆ.
ಇಂದು ನಸುಕಿನಲ್ಲಿ ಸೈಫ್ ಅಲಿ ಖಾನ್ ಅವರಿಗೆ ಚಾಕು ಇರಿತ ಆಗಿದೆ. ಮನೆಯಲ್ಲಿ ಅವರು ಮಲಗಿದ್ದ ವೇಳೆ ಕಳ್ಳರು ಬಂದಿದ್ದಾರೆ. ಕಳ್ಳತನ ತಡೆಯುವ ಪ್ರಯತ್ನ ಮಾಡಿದಾಗ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದಿದೆ. ಸೈಫ್ ಅಲಿ ಖಾನ್ ಅವರ ಮೇಲೆ ಆರಕ್ಕೂ ಹೆಚ್ಚು ಕಡೆಗಳಲ್ಲಿ ಗಾಯಗಳಾಗಿವೆ. ಸದ್ಯ ಅವರ ಸ್ಥೀತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದೆ.
ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣದಲ್ಲಿ ಮನೆಯಲ್ಲಿ ಕೆಲಸದವರ ಮೇಲೆ ಅನುಮಾನ ಮೂಡಿದೆ. ಇವರ ಮನೆಗೆ ಎರಡು ಗೇಟ್ಗಳಿವೆ. 4 ಜನ ಗಾರ್ಡ್ಗಳು ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ ಕಳ್ಳ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ಮನೆಯಲ್ಲಿ ಇರುವ ಯಾರಾದರೂ ಸಹಾಯ ಮಾಡಿದರೇ ಎನ್ನುವ ಪ್ರಶ್ನೆಯೂ ಮೂಡಿದೆ. ಪ್ರಕರಣದ ತನಿಖೆಗೆ ಮುಂಬೈ ಪೊಲೀಸರು 7 ತಂಡ ರಚಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.