ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲು ಸಾಲು ಫ್ಳಾಪ್ ಸಿನಿಮಾಗಳನ್ನು ಕೊಟ್ಟಿರುವ ನಟ ಸಲ್ಮಾನ್ ಖಾನ್ ಇದೀಗ ಸಿನಿಮಾ ಆಯ್ಕೆಯ ಸ್ಟೈಲ್‌ನ್ನೇ ಬದಲಾಯಿಸಿಕೊಂಡಿದ್ದಾರೆ.
ಕ್ಲಾಸಿಕ್ ಎನಿಸಿಕೊಂಡಿರುವ ‘ಜಿಂದಗಿ ನಾ ಮಿಲೇಗಿ ದುಬಾರಾ’, ‘ಗಲ್ಲಿ ಬಾಯ್’ ಇನ್ನಿತರೆ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಜನಪ್ರಿಯ ನಿರ್ದೇಶಕಿ ಜೋಯಾ ಅಖ್ತರ್ ಜೊತೆಗೆ ಸಲ್ಮಾನ್ ಖಾನ್ ಕೈ ಜೋಡಿಸಿದ್ದಾರೆ.
ಜೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಸಲ್ಮಾನ್ ಖಾನ್ರ ಈ ಹಿಂದಿ ಸಿನಿಮಾಗಳ ರೀತಿ ಅಲ್ಲದೆ, ಬಹಳ ಭಿನ್ನವಾದ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆಯಂತೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಜೋಯಾ ಅಖ್ತರ್, ‘ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡುವುದು ಅತ್ಯದ್ಭುತ ಅನುಭೂತಿ ಆಗಲಿದೆ. ಇಬ್ಬರಿಗೂ ಒಟ್ಟಿಗೆ ಕೆಲಸ ಮಾಡುವ ಆಸೆಯಿದೆ. ಆದರೆ ಸಲ್ಮಾನ್ ಖಾನ್, ಸೂಪರ್ ಸ್ಟಾರ್ ಅವರ ನಿರೀಕ್ಷೆಗಳ ಜೊತೆಗೆ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಗಳೂ ಸಹ ಜೊತೆಗಿರುತ್ತವೆ. ಹಾಗಾಗಿ ಸಲ್ಮಾನ್ ಖಾನ್, ಅವರ ಅಭಿಮಾನಿಗಳು ಹಾಗೂ ನನಗೆ ಮೂವರಿಗೂ ಒಪ್ಪಿಗೆ ಆಗುವ ವಿಷಯದ ಹುಡುಕಾಟದಲ್ಲಿದ್ದೇನೆ. ವಿಷಯ ಸಿಕ್ಕಿದ ಕೂಡಲೇ ತಡ ಮಾಡುವುದಿಲ್ಲ’ ಎಂದಿದ್ದಾರೆ.