CINE | ಸಲ್ಮಾನ್‌ ಸರ್‌ ಪ್ಲೀಸ್‌ ಹೀಗೆ ಮಾಡ್ಬೇಡಿ.. ವಿಭಿನ್ನ ಮನವಿ ಮುಂದಿಟ್ಟ ರಾಖಿ ಸಾವಂತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಲ್ಮಾನ್‌ ಸರ್‌ ಪ್ಲೀಸ್‌ ಮನೆಯ ಬಾಲ್ಕನಿಗೆ ಬಂದು ನಿಲ್ಲಬೇಡಿ, ಸ್ವಲ್ಪ ದಿನ ಅಭಿಮಾನಿಗಳನ್ನು ಭೇಟಿ ಮಾಡದಿದ್ರೂ ಪರವಾಗಿಲ್ಲ. ನಿಮ್ಮ ಜೀವನ ನಮಗೆ ಮುಖ್ಯ ಎಂದು ನಟಿ ರಾಖಿ ಸಾವಂತ್‌ ಮನವಿ ಮಾಡಿದ್ದಾರೆ. ಸಲ್ಮಾನ್‌ ಮನೆಯ ಮುಂದೆ ನಡೆದ ಗುಂಡಿನ ದಾಳಿ ಬಳಿಕ ರಾಖಿ ವಿಡಿಯೋ ಹರಿಬಿಟ್ಟಿದ್ದು, ಬಾಲ್ಕನಿಗೆ ಮಾತ್ರ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ಸಲ್ಮಾನ್ ಖಾನ್ ಮನೆ ಮುಂದೆ ನಡೆದ ಗುಂಡಿನ ದಾಳಿಯ ನಂತರ ಅವರ ಕುಟುಂಬ ಸಾಕಷ್ಟು ಆತಂಕ್ಕೆ ಒಳಗಾಗಿದೆ. ಸಲ್ಮಾನ್ ಹತ್ಯೆ ಮಾಡಲು ನಾನಾ ರೀತಿಯ ಕಸರತ್ತುಗಳನ್ನು ದುರುಳರು ಮಾಡುತ್ತಿದ್ದಾರೆ. ಹಾಗಾಗಿ ತಾವಿರುವ ಅಪಾರ್ಟ್ಮೆಂಟ್ ಅನ್ನು ಖಾಲಿ ಮಾಡಲು ಸಲ್ಮಾನ್ ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!