ಅಪ್ಪುಗೆ ಕೃಷಿ ಭೂಮಿಯಲ್ಲಿ ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಅಭಿಮಾನಿ

ಹೊಸದಿಗಂತ ವರದಿ, ಮಂಡ್ಯ:

ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನ ಅಗಲಿ ಮೂರು ತಿಂಗಳು ಕಳೆದಿದೆ. ಆದರೆ ಅವರ ನೆನಪುಗಳು ಮಾತ್ರ ಜನರ ಮನಸ್ಸಿಂದ ಮರೆಯಾಗದೆ ಹಾಗೆ ಉಳಿದಿದೆ.
ಇದಕ್ಕೆ ಪುಷ್ಟಿ ಎಂಬಂತೆ ಮಂಡ್ಯದಲ್ಲೊಬ್ಬ ಅಭಿಮಾನಿ ಅಗಲಿದ ಪುನೀತ್ ರಾಜ್‌ಕುಮಾರ್ ಅವರಿಗೆ ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆ ವಿಭಿನ್ನತೆ ಇಂದು ಮೊಳಕೆಯೊಡೆದು ಪೈರಾಗಿದೆ.
ತಾಲೂಕಿನ ಮೊತ್ತಹಳ್ಳಿ ಗ್ರಾಮದ ರೈತ ಕಾಳಪ್ಪ ರಾಜು ಎಂಬುವರು ಮತ್ತೆ ಹುಟ್ಟಿ ಬಾ ಪುನೀತ್ ರಾಜ್‌ಕುಮಾರ್ ಎಂದು ತಮ್ಮ ಭತ್ತ ಬಿತ್ತಿದ್ದರು.  ಅಂದು ಬತ್ತದಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದ ಜಾಗದಲ್ಲಿ ಈಗ ಪೈರು ಬೆಳೆದು ನಿಂತಿದೆ.
ರೈತ ಕಾಳಪ್ಪ ರಾಜು ಮಾತನಾಡಿ, ಪುನೀತ್ ರಾಜ್‌ಕುಮಾರ್ ಅಂದರೆ ನನಗೆ ತುಂಬಾ ಇಷ್ಟ. ಅವರ ನಟನೆಗೆ ನಾನು ಅಭಿಮಾನಿಯಾಗಿದ್ದೆ. ಆದರೆ ಅವರ ಸಾವು ನನಗೆ ಸಾಕಷ್ಟು ನೋವು ತರಿಸಿದೆ. ಹೀಗಾಗಿ ಅವರ ಶ್ರದ್ದಾಂಜಲಿಯನ್ನು ನನ್ನ ಜಮೀನಿನಲ್ಲಿ ಭತ್ತದಲ್ಲಿ ಅವರ ಹೆಸರನ್ನು ಬರೆದಿದ್ದೆ. ಇದೀಗ ಆ ಜಾಗದಲ್ಲಿ ಪೈರು ಬೆಳೆದಿದ್ದು, ಸುತ್ತಮುತ್ತಲಿನ ಜನರು ಅದನ್ನು ನೋಡಲು ಬರುತ್ತಿದ್ದಾರೆ. ಒಟ್ಟಾರೆ ಅಪ್ಪು ಎಲ್ಲರನ್ನು ಅಗಲಿದ್ದರೂ ಅಭಿಮಾನಿಗಳ ಮನಸ್ಸಿನಲ್ಲಿ ಹಾಗೇ ಉಳಿದಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!