ಸ್ಯಾಮ್‌ ಕರ್ರನ್‌ ಭರ್ಜರಿ ಬ್ಯಾಟಿಂಗ್: ಮುಂಬೈ ಗೆಲುವಿಗೆ 215 ರನ್​ ಗುರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮುಂಬೈ ಇಂಡಿಯನ್ಸ್​ ವಿರುದ್ಧದ ಶನಿವಾರದ ದ್ವಿತೀಯ ಐಪಿಎಲ್​ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕಿಂಗ್ಸ್​ ತಂಡ 214 ರನ್​ ಗಳಿಸಿ ಸವಾಲೊಡ್ಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ತಂಡ ಮೊದಲ 15 ಓವರ್‌ಗಳ ಬ್ಯಾಟಿಂಗ್‌ ಬಹಳ ನೀರಸವಾಗಿತ್ತು.ಪ್ರಭ್‌ ಸಿಮ್ರನ್‌ ಸಿಂಗ್‌ 17 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 1 ಬೌಂಡರಿ ಇದ್ದ 26 ರನ್‌ ಸಿಡಿಸಿದರೆ, ಅಥರ್ವ ಟೈಡೆ ಇಷ್ಟೇ ಎಸೆತದಲ್ಲಿ 1 ಸಿಕ್ಸರ್‌ ಹಾಗೂ 3 ಬೌಂಡರಿಗಳಿದ್ದ 29 ರನ್‌ ಸಿಡಿಸಿದರು.

ಅರ್ಜುನ್‌ ತೆಂಡುಲ್ಕರ್‌ ಎಸೆದ 16ನೇ ಓವರ್‌ನಲ್ಲಿ ಇಡೀ ಪಂದ್ಯ ಬದಲಾಗಿದ್ದು,. ಮೊದಲ ಎಸೆತವನ್ನು ಸ್ಯಾಮ್‌ ಕರ್ರನ್‌ ಸಿಕ್ಸರ್‌ಗಟ್ಟಿದರೆ, ಮರು ಎಸೆತ ವೈಡ್‌. ನಂತರದ ಎಸೆತದಲ್ಲಿ ಬೌಂಡರಿ ಸಿಡಿಸಿದ ಕರ್ರನ್‌ ಮೂರನೇ ಎಸೆತದಲ್ಲಿ 1 ರನ್‌ ತೆಗೆದು ಹರ್‌ಪ್ರೀತ್‌ ಸಿಂಗ್‌ಗೆ ಬ್ಯಾಟಿಂಗ್‌ ನೀಡಿದರು. ನಾಲ್ಕನೇ ಎಸೆತದಲ್ಲಿ ಹರ್‌ಪ್ರೀತ್‌ ಬೌಂಡರಿ ಸಿಡಿಸಿ ಇಬ್ಬರ ನಡುವಿನ ಅರ್ಧಶತಕದ ಜೊತೆಯಾಟ ಪೂರ್ಣ ಮಾಡಿದರೆ, 5ನೇ ಎಸೆತವನ್ನು ಸಿಕ್ಸರ್‌ಗಟ್ಟಿದರು. ನೋಬಾಲ್‌ ಆಗಿದ್ದ 6ನೇ ಎಸೆತದಲ್ಲಿ ಹರ್‌ಪ್ರೀತ್‌ ಬೌಂಡರಿ ಸಿಡಿಸಿದರೆ, ಫ್ರೀ ಹಿಟ್‌ ಆಗಿದ್ದ ಕೊನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಸಿಡಿಸಿ ಓವರ್‌ನಲ್ಲಿ ಒಟ್ಟು 31 ರನ್‌ ಚಚ್ಚಿದರು.

ಆ ಬಳಿಕ ಕ್ಯಾಮರೂನ್‌ ಗ್ರೀನ್‌ ಎಸೆದ 18ನೇ ಓವರ್‌ನ ಮೊದಲ ಎರಡು ಎಸೆತದಲ್ಲಿ ಕರ್ರನ್‌ ಸಿಕ್ಸರ್‌ ಸಿಡಿಸಿದರೆ, ಮೂರನೇ ಎಸೆತದಲ್ಲಿ 1 ರನ್‌ ನೀಡಿ ಹರ್‌ಪ್ರೀತ್‌ಗೆ ಬ್ಯಾಟಿಂಗ್‌ ನೀಡಿದರು.4ನೇ ಎಸೆತದಲ್ಲಿ ಹರ್‌ಪ್ರೀತ್‌ (41ರನ್‌, 28 ಎಸೆತ, 4 ಬೌಂಡರಿ, 2 ಸಿಕ್ಸರ್‌) ಔಟಾದರೆ, ಕ್ರೀಸ್‌ಗಿಳಿದ ಜಿತೇಶ್‌ ಶರ್ಮ ತಾವು ಎದುರಿಸಿದ ಮೊದಲ ಎರಡು ಎಸೆತಗಳನ್ನೂ ಸಿಕ್ಸರ್‌ಗಟ್ಟಿದರು. 29 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ ಸಿಡಿಸಿ ಸ್ಯಾಮ್‌ ಕರ್ರನ್‌ 19ನೇ ಓವರ್‌ನ ಕೊನೇ ಎಸೆತದಲ್ಲಿ ಔಟಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!