ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಮತ್ತು ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಮನೆಗೆ ಹೊಸ ಅತಿಥಿ ಬರೋ ಟೈಮ್ ಹತ್ತಿರವಾಗ್ತಿದೆ. ಸದ್ಯದಲ್ಲೇ ಈ ಜೋಡಿ ತಮ್ಮ ಮೊದಲ ಮಗುವನ್ನು ಈ ಜಗತ್ತಿಗೆ ಸ್ವಾಗತ ಮಾಡಲಿದ್ದಾರೆ. ಇತ್ತೀಚೆಗೆ ಸಮಂತಾ ಏರ್‌ಪೋರ್ಟ್‌ನಲ್ಲಿ ತಮ್ಮ ಬೇಬಿ ಬಂಪ್ ಜೊತೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಅಲ್ಲಿ ನಡೆದ ಒಂದು ಸಣ್ಣ ಕ್ಯೂಟ್ ಘಟನೆ ಈಗ ಇಡೀ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ.
ಸಮಂತಾ ಏರ್‌ಪೋರ್ಟ್‌ಗೆ ಬಂದಾಗ, ಅವರ ಗಂಡ ರಾಜ್ ನಿಡಿಮೋರು ಕೂಡ ಜೊತೆಯಲ್ಲೇ ಬಂದು ಡ್ರಾಪ್ ಮಾಡಿದ್ದರು. ಕಾರಿನಿಂದ ಕೆಳಗಿಳಿದ ಸಮಂತಾ, ಒಳಗೆ ಹೋಗೋ ಮುಂಚೆ ಗಂಡ ರಾಜ್‌ಗೆ ಅತ್ಯಂತ ಪ್ರೀತಿಯಿಂದ ಒಂದು ಅಪ್ಪುಗೆ ಕೊಟ್ಟರು. ಈ ಮುದ್ದಾದ ಕ್ಷಣವನ್ನು ಯಾರೋ ವಿಡಿಯೋ ಮಾಡಿ ಇಂಟರ್ನೆಟ್‌ಗೆ ಅಪ್ಲೋಡ್ ಮಾಡಿದ್ದು, ಕ್ಷಣಾರ್ಧದಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ. ಇಬ್ಬರ ನಡುವಿನ ಪ್ರೀತಿ ಮತ್ತು ಕಾಳಜಿ ಪ್ರತಿಯೊಬ್ಬರ ಗಮನ ಸೆಳೆದಿದೆ.
https://www.instagram.com/reel/DdVxx6OTOGv/?utm_source=ig_web_button_share_sheet
ಈ ಕ್ಯೂಟ್ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕಮೆಂಟ್ ಸೆಕ್ಷನ್‌ನಲ್ಲಿ ಫ್ಯಾನ್ಸ್ ಸಾಲು ಸಾಲಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಅಭಿಮಾನಿ “ರಾಜ್ ನಿಜಕ್ಕೂ ನಿಜವಾದ ಗ್ರೀನ್ ಫ್ಲ್ಯಾಗ್, ಹೆಂಡತಿಯನ್ನು ಎಷ್ಟು ಚನ್ನಾಗಿ ನೋಡ್ಕೋತಾರೆ!” ಅಂದರೆ, ಇನ್ನೊಬ್ಬರು “ದೇವರು ಸಮಂತಾಗೆ ತುಂಬಾ ಒಳ್ಳೆಯ, ಕಾಳಜಿ ವಹಿಸೋ ಗಂಡನನ್ನು ಕೊಟ್ಟಿದ್ದಾನೆ” ಎಂದು ಹಾರೈಸಿದ್ದಾರೆ. ಮತ್ತೆ ಕೆಲವರು “ಆ ಅಪ್ಪುಗೆ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ, ಎಷ್ಟು ಎಮೋಷನಲ್ ಆಗಿದೆ” ಎಂದು ಬರೆದುಕೊಂಡಿದ್ದಾರೆ. ಇಬ್ಬರ ನಡುವಿನ ಪ್ರೀತಿ ಮತ್ತು ಬಾಂಡಿಂಗ್ ನೋಡಿ ಫ್ಯಾನ್ಸ್ ಈ ಜೋಡಿಗೆ ದೃಷ್ಟಿ ತಾಕದಿರಲಿ ಎಂದು ಹಾರೈಸುತ್ತಿದ್ದಾರೆ.
ಜೀವನದಲ್ಲಿ ಎಷ್ಟೇ ಕಷ್ಟ-ನಷ್ಟ, ಅನಾರೋಗ್ಯ ಎದುರಾದರೂ ಬಂಡೆಯಂತೆ ನಿಂತು ಹೋರಾಡಿದ ಸಮಂತಾಗೆ, ಈಗ ರಾಜ್ ನಿಡಿಮೋರು ರೂಪದಲ್ಲಿ ಸಿಕ್ಕಿರೋ ಪ್ರೀತಿ ಮತ್ತು ಬರಲಿರೋ ಮಗುವಿನ ಖುಷಿ ಅವರ ಜೀವನದಲ್ಲಿ ಹೊಸ ಸಂಭ್ರಮ ತಂದಿದೆ. ಸ್ಯಾಮ್ ಮುಖದಲ್ಲಿರೋ ಆ ಪ್ರೆಗ್ನೆನ್ಸಿ ಗ್ಲೋ ನೋಡಿ ಅವರ ಫ್ಯಾನ್ಸ್ ಅಂತೂ ಈ ವೀಡಿಯೋನ ಶೇರ್ ಮಾಡ್ತಾನೇ ಇದ್ದಾರೆ.



