ಕಲಾಪದ ವೇಳೆ ಫೇಸ್‌ಬುಕ್‌ ಲೈವ್ ಹೋದ ಸಮಾಜವಾದಿ ಪಕ್ಷದ ಶಾಸಕ: ವಿಧಾನ ಸಭೆಯಿಂದಲೇ ಅಮಾನತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದಲ್ಲಿ ವಿಧಾನ ಸಭೆಯ ಕಲಾಪದ ವೇಳೆ ಸಮಾಜವಾದಿ ಪಕ್ಷದ (SP) ಶಾಸಕರೊಬ್ಬರು ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ನಡೆಸಿರುವ ಘಟನೆ ನಡೆದಿದೆ. ಇದೀಗ ಲೈವ್ ನಡೆಸಿದಕ್ಕಾಗಿ ಶಾಸಕನನ್ನು ವಿಧಾನಸಭಾ ಸ್ಪೀಕರ್ ತಕ್ಷಣವೇ ಅಮಾನತುಗೊಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಸರ್ಧಾನ್‌ನ (ಮೀರತ್) ಎಸ್‌ಪಿ ಶಾಸಕ ಅತುಲ್ ಪ್ರಧಾನ್ ತಮ್ಮ ಫೇಸ್‌ಬುಕ್ ಖಾತೆಯಿಂದ ಲೈವ್ ನಡೆಸಿದ್ದಾರೆ. ವಿಧಾನಸೌಧದ ಒಳಗಡೆ ಸುಮಾರು 2.22 ನಿಮಿಷದ ವರೆಗೆ ವೀಡಿಯೋ ಲೈವ್ ನಡೆಸಿದ್ದು, ಅವರು ಲೈವ್ ನಡೆಸುತ್ತಿದ್ದ ಫೋನ್ ಯಾರಿಗೂ ಕಾಣಿಸದಂತೆ ಸೊಂಟದ ಮಟ್ಟದಲ್ಲಿ ಹಿಡಿದುಕೊಂಡಿರುವುದು ಕಂಡುಬಂದಿದೆ.

ಕಲಾಪ ನಡೆಯುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ಸದಸ್ಯರು ರಾಮ್‌ಪುರ ಉಪಚುನಾಣೆಗೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪ್ರಧಾನ್ ಫೇಸ್‌ಬುಕ್ ಲೈವ್ ನಡೆಸಿದ್ದಾರೆ. ಈ ವಿಚಾರ ಸ್ಪೀಕರ್ ಗಮನಕ್ಕೆ ಬರುತ್ತಿದ್ದಂತೆಯೇ ಪ್ರಧಾನ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಇದಾದ 1 ಗಂಟೆಯ ಬಳಿಕ ಅತುಲ್ ಅವರಿಗೆ ಸದನಕ್ಕೆ ಹಾಜರಾಗಲು ಸ್ಪೀಕರ್ ಅನುಮತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!