ಮಲಯಾಳಂಗೆ ಸಮಂತಾ ಎಂಟ್ರಿ, ಅಲ್ಲಿಯೂ ಲೇಡಿ ಓರಿಯೆಂಟೆಡ್ ಸಿನಿಮಾ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಗ ಚೈತನ್ಯರಿಂದ ವಿಚ್ಛೇದನ ಪಡೆದ ನಂತರ ಸಮಂತಾ ವೃತ್ತಿಜೀವನದ ಮೇಲೆ ತಮ್ಮ ಗಮನವನ್ನು ಹೆಚ್ಚು ಕೇಂದ್ರೀಕರಿಸಿದ್ದಾರೆ. ಸಾಲು ಸಾಲು ಸಿನಿಮಾಗಳು, ಜಾಹೀರಾತುಗಳು, ಐಟಂ ಹಾಡು ಹೀಗೆ ಬರುವ ಪ್ರತಿ ಆಫರ್ ಗಳನ್ನೂ ಓಕೆ ಮಾಡುತ್ತಿದ್ದಾರೆ. ಈಗಾಗಲೇ ಟಾಲಿವುಡ್‌ನಲ್ಲಿ ಮೂರು ಸಿನಿಮಾ, ತಮಿಳಿನಲ್ಲಿ ಒಂದು ಸಿನಿಮಾ, ಬಾಲಿವುಡ್ ನಲ್ಲಿ ಒಂದು ಸಿನಿಮಾ, ಒಂದು ಸೀರಿಸ್, ಒಂದು ಹಾಲಿವುಡ್ ಸಿನಿಮಾ ಹೀಗೆ ಅರ್ಧ ಡಜನ್ ಪ್ರಾಜೆಕ್ಟ್‌ಗಳಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ ಸಾಲಾಗಿ ಜಾಹೀರಾತುಗಳನ್ನು ಮಾಡುವ ಮೂಲಕ ಉತ್ತಮ ಹಣವನ್ನೂ ಸಂಪಾದನೆ ಮಾಡುತ್ತಿದ್ದಾರೆ.

ಇದೀಗ ಸಮಂತಾ ಮತ್ತೊಂದು ಪ್ರಾಜೆಕ್ಟ್ ಓಕೆ ಮಾಡಿದ್ದಾರಂತೆ. ಈಗಾಗಲೇ ಬಾಲಿವುಡ್, ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡಿರುವ ಸಮಂತಾ, ಮಲಯಾಳಂನಲ್ಲಿ ಇದುವರೆಗೂ ಸಿನಿಮಾ ಮಾಡಿಲ್ಲ. ಹಾಗಾಗಿ ಹೊಸದಾಗಿ ಮಲಯಾಳಂ ಸಿನಿಮಾ ಪ್ರಾಜೆಕ್ಟ್‌ಗೆ ಸಮಂತಾ ಒಪ್ಪಿಕೊಂಡಿದ್ದಾರೆ.

ಮಲಯಾಳಂನ ಹಿರಿಯ ನಿರ್ದೇಶಕ ಶಾಜಿ ಕೈಲಾಸ್ ಅವರು ‘ಪಿಂಕ್ ಪೊಲೀಸ್’ ಎಂಬ ಶೀರ್ಷಿಕೆಯ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದು ಪಕ್ಕಾ ಲೇಡಿ ಓರಿಯೆಂಟೆಡ್ ಸಿನಿಮಾ ಈಗಾಗಲೇ ಸಮಂತಾ ಈ ಕಥೆಯನ್ನು ಕೇಳಿ ಓಕೆ ಹೇಳಿದ್ದಾರಂತೆ. ಸದ್ಯ ಸಮಂತಾ ಖುಷಿ, ಯಶೋದಾ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇವೆರಡೂ ಮುಗಿದ ನಂತರ ಮಲಯಾಳಂ ಸಿನಿಮಾ ಶುರುವಾಗಲಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!