ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಂತಾ ಸದ್ಯ ಸಿನಿಮಾಗಳಿಂದ ವಿರಾಮ ತೆಗೆದುಕೊಂಡು ಮಯೋಸಿಟಿಸ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುರ್ವೇದ ಮತ್ತಿತರ ಚಿಕಿತ್ಸೆಗೊಳಗಾಗಿರುವ ಸಮಂತಾ ಇತ್ತೀಚೆಗಷ್ಟೇ ಭಾರತಕ್ಕೆ ಬಂದಿದ್ದರು. ಈ ವೇಳೆ ಮ್ಯಾಗಜಿನ್‌ವೊಂದಕ್ಕೆ ಸಂದರ್ಶನ ಕೊಟ್ಟ ಸಮಂತಾ ತನ್ನ ಬದುಕಿನಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.
ಆ ಸಂದರ್ಶನಕ್ಕೆ ಸಂಬಂಧಿಸಿದ ವಿಷಯವನ್ನು ಸಮಂತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಸಿನಿಮಾಗಳು ಸೋಲು ಕಂಡವು, ವಿಚ್ಛೇದನ, ಆರೋಗ್ಯ ಸಮಸ್ಯೆ ಮತ್ತು ಟೀಕೆಗಳು ನನ್ನನ್ನು ಮತ್ತಷ್ಟು ಖಿನ್ನತೆಗೆ ಒಳಪಡಿಸಿವೆ. ಆದರೆ ಅವುಗಳಿಂದ ಹೊರಬರುವುದು ಹೇಗೆ ಎಂದು ಯೋಚಿಸಿದೆ. ಹೀಗಿರುವಾಗ ನನ್ನಂತೆ ಹಿಂದೆಯೂ ಈ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವವರು ಇದರಿಂದ ಹೇಗೆ ಚೇತರಿಸಿಕೊಂಡಿದ್ದಾರೆ ಎಂಬುದನ್ನರಿತು ಅವರ ಬಗ್ಗೆ ಓದಿದೆ. ಅವರಿಂದಲೇ ನಾನು ನನ್ನ ಸಮಸ್ಯೆಗಳಿಂದ ಚೇತರಿಸಿಕೊಂಡಿದ್ದೇನೆ” ಎಂದರು.
ಸ್ಟಾರ್ ಸ್ಥಾನಮಾನವನ್ನು ಸಾಧಿಸುವುದು ಅದ್ಭುತ ಕೊಡುಗೆ. ಆ ಸ್ಥಾನವನ್ನು ಜವಾಬ್ದಾರಿಯಾಗಿ ತೆಗೆದುಕೊಳ್ಳಿ ಮತ್ತು ನಿಮ್ಮ ಕಥೆಗಳನ್ನು ಎಲ್ಲರಿಗೂ ತಿಳಿಸಿ. ಇಂತಹ ಸಮಸ್ಯೆಯನ್ನು ಎದುರಿಸುವವರಿಗೆ ನಿಮ್ಮ ಕಥೆಯೂ ಉತ್ತರವಾಗಿರುತ್ತದೆ. ನಮ್ಮ ಜೀವನವೇ ಅವರಿಗೆ ಪರಿಹಾರವಾಗಲಿದೆ. ಅದಕ್ಕಾಗಿ ಸಾರ್ವಜನಿಕವಾಗಿ ಒಳಿತು ಕೆಡುಕಿನ ಬಗ್ಗೆ ಮಾತನಾಡುತ್ತಲೇ ಇರುತ್ತೇನೆ ಎಂಬುದಾಗಿ ತಿಳಿಸಿದರು.