ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ನಟಿ ಸಮಂತಾ ಮತ್ತೆ ಸಿನಿಮಾಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ‘ಸಿಟಾಡೆಲ್’ ಬಳಿಕ ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿದ್ದಾರೆ. ‘ಆಶಿಕಿ 2’ ಆದಿತ್ಯ ರಾಯ್ ಕಪೂರ್ ಜೊತೆ ಸಮಂತಾ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.
ರಾಜ್ ಮತ್ತು ಡಿಕೆ ನಿರ್ಮಾಣದ ಹೊಸ ವೆಬ್ ಸರಣಿ ‘ರಕ್ತ ಬ್ರಹ್ಮಾಂಡ್’ದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸೆಟ್‌ಗೆ ಎಂಟ್ರಿ ಕೊಟ್ಟಿರುವ ಬಗ್ಗೆ ನಟಿ ಬರೆದುಕೊಂಡಿದ್ದಾರೆ. ಹಲವು ತಿಂಗಳುಗಳ ನಂತರ ಸೆಟ್‌ಗೆ ಮರಳಿರೋದು ಖುಷಿ ಇದೆ ಎಂದಿದ್ದಾರೆ. ಅಂದಹಾಗೆ, ಸಮಂತಾಗೆ ರಾಹಿ ಅನಿಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವತ ಜೊತೆಗೆ ಆದಿತ್ಯಾ ರಾಯ್ ಕಪೂರ್, ವಮಿಕಾ ಗಬ್ಬಿ, ಅಲಿ ಫಜಲ್ ಕೂಡ ನಟಿಸುತ್ತಿದ್ದಾರೆ