ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಸಮಂತಾ ಮಾಜಿ ಪತಿ ನಾಗಚೈತನ್ಯ ನಟಿ ಸೋಭಿತಾ ಧುಲಿಪಾಲ ಜೊತೆ ಎಂಗೇಜ್ ಆಗಿದ್ದಾರೆ. ಸಮಂತಾ ಜೊತೆ ನಾಗಚೈತನ್ಯ ಒಂದಾಗ್ತಾರೆ ಎನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ. ಹಾಗಿದ್ರೆ ಸಮಂತಾ ಒಂಟಿ ಆಗೋದ್ರು ಎಂದು ಫ್ಯಾನ್ಸ್ ಬೇಸರದಲ್ಲಿದ್ದರು.
ಆದರೆ ಸಮಂತಾ ಕೂಡ ಸಿಂಗಲ್ ಅಲ್ಲ, ಅವ್ರು ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ. ನಿರ್ದೇಶಕ ರಾಜ್ ನಿಡಿಮೋರ್ ಜೊತೆಗೆ ನಟಿ ಸಮಂತಾ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೆಬ್ ಸೀರಿಸ್ನಲ್ಲಿ ಜೊತೆಯಾದ ನಂತರದಿಂದ ಸಮಂತಾ ಆತನ ಜೊತೆಗೆ ಡೇಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಇದಕ್ಕೆಲ್ಲ ನಟಿಯೇ ಉತ್ತರ ನೀಡಬೇಕಿದೆ.