CINE | ಕದ್ದು ಮುಚ್ಚಿ ಓಡಾಡದೇ ಓಪನ್‌ ಆಗಿಯೇ ನಿರ್ದೇಶಕನ ಜತೆ ಡೇಟಿಂಗ್‌ ಮಾಡ್ತಿರೋ ಸಮಂತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಮಂತಾ ನಿರ್ದೇಶಕ ರಾಜ್ ನಿದಿಮೋರು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಸುದ್ದಿಗೆ ಈಗ ಮತ್ತಷ್ಟು ಬಲ ಸಿಕ್ಕಿದೆ.

ನಟಿ ನಾಗಚೈತನ್ಯ ಜೊತೆಗಿನ ಡಿವೋರ್ಸ್‌ ನಂತರ ಎಲ್ಲಾ ಕಡೆಯೂ ಒಬ್ಬರೇ ಕಾಣಿಸಿಕೊಂಡಿದ್ದಾರೆ. ಇದೀಗ ಡೈರೆಕ್ಟರ್‌ ಒಬ್ಬರ ಜೊತೆ ನಟಿ ಹೆಸರು ಕೇಳಿದೆ.

ಸಮಂತಾ ಹಾಗೂ ರಾಜ್ ಇತ್ತೀಚೆಗೆ ಹೆಚ್ಚು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ರಾಜ್ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್’ ಹಾಗೂ ‘ಸಿಟಾಡೆಲ್: ಹನಿ ಬನಿ’ ಸೀರಿಸ್​ಗಳಲ್ಲಿ ಸಮಂತಾ ನಟಿಸಿದ್ದರು. ಆ ಸಂದರ್ಭದಲ್ಲಿ ಇವರ ಮಧ್ಯೆ ಆಪ್ತತೆ ಬೆಳೆದಿದೆ. ಇಷ್ಟು ದಿನ ಕದ್ದುಮುಚ್ಚಿ ಓಡಾಡುತ್ತಿದ್ದ ಇವರು ಈಗ ಓಪನ್ ಆಗಿ ಸುತ್ತಾಟ ಆರಂಭಿಸಿದ್ದು, ಇದರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸಮಂತಾ ಅವರು ‘ಪಿಕಲ್​ಬಾ್ ಟೂರ್ನ್​ಮೆಂಟ್’ ಒಂದರಲ್ಲಿ ಭಾಗಿ ಆಗಿದ್ದರು. ಇದರಲ್ಲಿ ರಾಜ್ ಕೂಡ ಸಮಂತಾ ಜೊತೆ ಇದ್ದರು. ಈ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದು, ಅವರು ನಗು ನಗುತ್ತಾ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ನಿರ್ದೇಶಕನ ಕೈ ಹಿಡಿದು ನಿಂತಿದ್ದಾರೆ. ಇದು ಅನುಮಾಗಳನ್ನು ಹೆಚ್ಚಿಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!