CINI | ಸೂಪರ್‌ ಹಿಟ್‌ ‘ಊ ಅಂಟಾವಾ’ ಸಾಂಗ್‌ಗೆ ಸಮಂತಾ ಫಸ್ಟ್‌ ಚಾಯ್ಸ್‌ ಅಲ್ವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2021 ರಲ್ಲಿ ಪುಷ್ಪ ಫಸ್ಟ್ ಪಾರ್ಟ್​ನಲ್ಲಿ ಬಂದ “ಊ ಅಂಟವಾ” ಹಾಡಿನ ಉತ್ಸಾಹ ಇಂದಿಗೂ ಕಡಿಮೆಯಾಗಿಲ್ಲ. ಸಖತ್ ಕ್ರೇಜ್ ಸೃಷ್ಟಿಸಿದ ಡ್ಯಾನ್ಸ್ ಹಾಗೂ ಹೆಚ್ಚು ಪ್ರಚಾರ ಪಡೆದ ಈ ಹಾಡಿನಲ್ಲಿ ಸಮಂತಾ ರುತ್ ಪ್ರಭು, ಅಲ್ಲು ಅರ್ಜುನ್ ಜೊತೆಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ.

ಇತ್ತೀಚೆಗೆ ಚಿತ್ರದ ನಿರ್ಮಾಪಕ ರವಿಶಂಕರ್ ಈ ಹಾಡಿನ ಬಗ್ಗೆ ಕೆಲವೊಂದು ಆಶ್ಚರ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದರು. ‘ಊ ಅಂಟಾವಾ’ ಹಾಡಿಗಾಗಿ ಸಂಪರ್ಕಿಸಿದ ಮೊದಲ ನಟಿ ಸಮಂತಾ ರುತ್ ಪ್ರಭು ಅಲ್ಲ ಎಂದು ಹೇಳಿದ್ದರು.

ಆರಂಭದಲ್ಲಿ ನಟಿ ಕೇತಿಕಾ ಶರ್ಮಾ ಅವರನ್ನು ಈ ಡ್ಯಾನ್ಸ್ ಮಾಡುವಂತೆ ಕೇಳಲಾಗಿತ್ತು. ಆದರೆ ಕೇತಿಕಾ ಆ ಸಮಯದಲ್ಲಿ ಬ್ಯುಸಿ ಇದ್ದ ಕಾರಣ ಡ್ಯಾನ್ಸ್ ಅವಕಾಶ ಸಮಂತಾ ರುತ್ ಪ್ರಭುಗೆ ದೊರೆಯಿತು ಎಂದಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!