ಮಾಜಿ ಪತಿ ನಾಗಚೈತನ್ಯರನ್ನು ಇನ್ಸ್ಟಾದಲ್ಲಿ ಅನ್‌ ಫಾಲೋ ಮಾಡಿದ ಸಮಂತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತಾರಾ ದಂಪತಿ ಸಮಂತಾ- ನಾಗಚೈತನ್ಯ ಕಳೆದ ವರ್ಷ ಡಿವೋರ್ಸ್‌ ಘೋಷಿಸಿದ್ದ ಅಭಿಮಾನಿಗಳಿಗೆ ಆಘಾತ ತಂದಿತ್ತು. ಪ್ರತ್ಯೇಕವಾದ ಬಳಿಕವೂ ಒಂದಿಲ್ಲೊಂದು ವೈಯಕ್ತಿಕ, ವೃತ್ತಿಸಂಬಂಧಿ ಕಾರಣಗಳಿಗೆ ಇಬ್ಬರು ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಮಾಜಿ ದಂಪತಿ ಬೇರೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಸಮಂತಾ ಮಾಜಿ ಪತಿ ನಾಗ ಚೈತನ್ಯರನ್ನು ಇನ್​ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡಿದ್ದಾರೆ. ಅದಕ್ಕಿಂತ ಮುಂಚೆ ನಾಗಚೈತನ್ಯ ಅವರೊಂದಿಗಿದ್ದ ಎಲ್ಲಾ ಫೋಟೋಗಳನ್ನು ಸಹ ಇನ್ಸ್ಟಾಗ್ರಾಮ್‌ ನಿಂದ ಡಿಲೀಟ್‌ ಮಾಡಿದ್ದಾರೆ. ಆದರೆ ನಾಗ ಚೈತನ್ಯ ಮಾತ್ರ ಸಮಂತಾರನ್ನು ಇನ್ನೂ ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. ಸಧ್ಯ ಈ ವಿಚಾರ ಅಭಿಮಾನಿಗಳ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಮಂತಾ ಶಾಕುಂತಲಂ, ಕಾಥುವಾಕುಲ ರೆಂಡು ಕಾದಲ್, ಅರೇಂಜ್​ಮೆಂಟ್ಸ್ ಆಫ್ ಲವ್ ಮೊದಲಾದ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಚ್ಛೇದನದ ನಂತರ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಸಮಂತಾ ಅವರ ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳು ಬಿಡುಗಡೆ ಕಾಣುತ್ತಿವೆ.
ನಾಗ ಚೈತನ್ಯ ತಮ್ಮ ಚೊಚ್ಚಲ ಬಾಲಿವು ಚಿತ್ರ ಲಾಲ್ ಸಿಂಗ್ ಛಡ್ಡಾದಲ್ಲಿ ಆಮಿರ್ ಖಾನ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲಿಯೇ ತೆರೆಕಾಣಲಿದ್ದು, ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!