ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನ ಹ್ಯಾಂಡ್ಸಮ್ ಹೀರೋ, ಅಕ್ಕಿನೇನಿ ಕುಟುಂಬದ ಕಿರಿಯ ಕುಡಿ ಅಖಿಲ್ ಅಕ್ಕಿನೇನಿ ನಿನ್ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸ್ಟಾರ್ ನಟನಾದ್ದರಿಂದ ಅಭಿಮಾನಿಗಳು, ಸಿನಿ ತಾರೆಯರು ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಯಾರೂ ನೀರೀಕ್ಷೆ ಮಾಡದಿದ್ದ ಸ್ಟಾರ್ ಸೆಲೆಬ್ರಿಟಿಯೊಬ್ಬರು ಅಚ್ಅಚರಿಯ ರೀತಿಯಲ್ಲಿ ನಿಖಿಲ್ ಗೆ ಬರ್ತ್ ಡೇ ವಿಶ್ ಮಾಡಿರುವುದು ನೆಟ್ಟಿಗರಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಅಖಿಲ್ ಗೆ ವಿಶ್ ಮಾಡಿದ್ದು ಮಾತ್ಯಾರೂ ಅಲ್ಲ ಅವರ ಮಾಜಿ ಅತ್ತಿಗೆ ಸಮಂತಾ ರುತ್ ಪ್ರಭು. ಅಖಿಲ್ ಸಹೋದರ ನಾಗಚೈತನ್ಯರಿಂದ ಕಳೆದ ವರ್ಷವಷ್ಟೇ ವಿಚ್ಛೇದನ ಪಡೆದಿದ್ರು. ಅಕ್ಕಿನೇನಿ ಕುಟುಂಬದಿಂದ ಹೊರಬಂದ ಬಳಿಕ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆಗಿಂದಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿದ್ದು, ನಡೆದ ಘಟನೆಯಿಂದ ಹೊರಬರಲು ಸಾಕಷ್ಟು ಮೋಟಿವೇಷನಲ್ ಸ್ಪೀಚ್‌ಗಳನ್ನು ಪೋಸ್ಟ್ ಮಾಡಿದ್ದರು.
ಡಿವೋರ್ಸ್ ಆದ ಬಳಿಕ ಅಕ್ಕಿನೇನಿ ಕುಟುಂಬದ ಯಾರೊಬ್ಬರ ಬಳಿಯೂ ಮಾತನಾಡಿದ್ದೇ ಆಗಲಿ, ಪ್ರತಿಕ್ರಿಯೆ ನೀಡಿದ್ದೇ ಆಗಲಿ ಕಂಡುಬಂದಿಲ್ಲ. ಯಾವುದೋ ಸಿನಿಮಾ ಕಾರ್ಯಕ್ರಮದಲ್ಲಿ ನಾಗ್ ಹಾಗೂ ಸಮಂತಾ ಇಬ್ಬರೂ ಹಾಜರಾಗಿದ್ದರೂ ಒಬ್ಬರನ್ನೊಬ್ಬರು ನೋಡದೆ ಮುಖ ತಿರುಗಿಸಿಕೊಂಡು ಹೋದ ಪ್ರಸಂಗವೂ ಇದೆ.
ಹೀಗಿರುವಾಗ ನಿನ್ನೆ ಅಖಿಲ್ ಹುಟ್ಟುಹಬ್ಬಕ್ಕೆ ಸಮಂತಾ ವಿಶ್ ಮಾಡಿದ್ದಾರೆ. ‘‘ಹುಟ್ಟುಹಬ್ಬದ ಶುಭಾಶಯಗಳು ಅಖಿಲ್. ಈ ವರ್ಷ ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ. ನಿನಗೆ ಬೇಕಾದ್ದನ್ನೆಲ್ಲ ದೇವರು ಕೊಡಲಿ..” ಎಂದು ಸಮಂತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಕ್ಕಿನೇನಿ ಕುಟುಂಬದೊಂದಿಗೆ ಸಂಬಂಧ ಕಡಿದುಕೊಂಡ ಬಳಿಕ ಆ ಕುಟುಂಬದ ನಾಯಕನಿಗೆ ಸ್ಯಾಮ್ ಈ ರೀತಿ ವಿಶ್ ಹೇಳಿರುವುದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಸಮಂತಾ ಪ್ರಸ್ತುತ ತನ್ನ ವೃತ್ತಿಜೀವನ ರೂಪಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಅವಕಾಶಗಳನ್ನು ಗಿಟ್ಟಿಸಿಕೊಂಡು ಬಾಲಿವುಡ್‌ನಲ್ಲೂ ತನ್ನ ಛಾಪು ಮೂಡಿಸುತ್ತಿದ್ದಾರೆ ಸ್ಯಾಮ್.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ