September 30, 2026
Wednesday, September 30, 2026
spot_img

‘ಸಂಪಾಯಿತಲೇ ಪರಾಕ್’: ಮೈಲಾರ ಸುಕ್ಷೇತ್ರದ ಕಾರ್ಣಿಕೋತ್ಸವ ದೈವವಾಣಿ

ಹೊಸದಿಗಂತ ವರದಿ ವಿಜಯನಗರ:

ಸಂಪಾಯಿತಲೇ ಪರಾಕ್…

ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಡೆಂಕನ ಮರಡಿಯಲ್ಲಿ 18 ಅಡಿ ಬಿಲ್ಲನ್ನೇರಿ ಗೋರವಯ್ಯ ರಾಮಪ್ಪ ನುಡಿದ ಭವಿಷ್ಯವಾಣಿ ಇದು.‌ ದೈವವಾಣಿ ಕೇಳಲು ನೆರೆದಿದ್ದ ಸುಮಾರು 8-10 ಲಕ್ಷ ಭಕ್ತ ಸಮೂಹ ಭಕ್ತಿ ಪರಾಕಾಷ್ಠೆಯಲ್ಲಿ ಮಿಂದೆದ್ದರು.

ಇದಕ್ಕೂ ಮುನ್ನ ʼಗೋರವಯ್ಯ ರಾಮಪ್ಪ ಸದ್ದಲೇ… ಕೋಟಿ ಕೋಟಿ ಕೇಳಿರೋʼ ಎಂಬ ಕೂಗು ಕೇಳುತ್ತಿದ್ದಂತೆ ಇಡೀ ಮೈದಾನವೇ ಮೌನಕ್ಕೆ ಶರಣಾಯಿತು.

ಸಂಪಾಯಿತಲೇ ಪರಾಕ್ ಎಂಬ ಭವಿಷ್ಯವಾಣಿಯು ರೈತರಿಗೆ ಪ್ರಸಕ್ತ ವರ್ಷದಲ್ಲಿ ಉತ್ತಮವಾದ ಮಳೆ, ಬೆಳೆಯಾಗಿ ನಾಡು ಸಮೃದ್ಧಿಯಾಗಿರಲಿದೆ ಎಂದು ಭಕ್ತರ ವಿಶ್ಲೇಷಣೆಯಾಗಿದೆ.

Must Read