ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಸ್ಯಾಮ್‌ ಸಂಗ್‌ ಸ್ಮಾರ್ಟ್ ಫೋನ್‌ ದಾಖಲೆ ಮಾರಾಟ: ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ಯಾಮ್‌ಸಂಗ್ ಇಲೆಕ್ಟ್ರಾನಿಕ್ಸ್ ಕಂಪನಿಯು ಭಾರತದಲ್ಲಿ ತನ್ನ ಅತ್ಯುತ್ತಮ ದೀಪಾವಳಿ ಹಬ್ಬದ ಮಾರಾಟವನ್ನು ಸಾಧಿಸಿದೆ, ಹೆಚ್ಚುತ್ತಿರುವ ಹಣದುಬ್ಬರದ ಹೊರತಾಗಿಯೂ ಗ್ರಾಹಕರಿಂದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳಿಗೆ ಬೇಡಿಕೆಯು ಉತ್ತಮವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಕೊರಿಯನ್ ಮೂಲದ ಸ್ಯಾಮ್‌ ಸಂಗ್ ಕಂಪನಿಯು ಎರಡು ತಿಂಗಳಲ್ಲಿ ಸರಿಸುಮಾರು 14,000 ಕೋಟಿ ರೂ. ( 1.7 ಶತಕೋಟಿ ಡಾಲರ್ ) ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ, ಇದು ಭಾರತದ ಪ್ರಮುಖ ಶಾಪಿಂಗ್ ಋತುವನಲ್ಲಿನ ಅತ್ಯಂತ ಹೆಚ್ಚಿನ ಮಾರಾಟವಾಗಿದೆ. ಇದು ದೇಶೀಯ ಬಳಕೆಯಲ್ಲಿ ಹೆಚ್ಚಳವನ್ನು ಸೂಚಿಸುತ್ತಿದೆ. ಕಂಪನಿಯ ಫ್ಲಾಗ್‌ ಶಿಪ್‌ ಉತ್ಪನ್ನವಾದ ಫ್ಲಿಪ್ ಮತ್ತು ಫೋಲ್ಡ್‌ ಮಾದರಿಯ ಎಸ್ 22 ಮಾದರಿಯ ಮಾರಾಟದಲ್ಲಿ ಅತಿ ಹೆಚ್ಚು ಏರಿಕೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಸ್ಯಾಮ್‌ಸಂಗ್‌ನ ಇಂಡಿಯಾ ಮೊಬೈಲ್ ವ್ಯಾಪಾರದ ಉತ್ಪನ್ನ ಮಾರ್ಕೆಟಿಂಗ್ ಮುಖ್ಯಸ್ಥ ಆದಿತ್ಯ ಬಬ್ಬರ್ “ಇದು ನಮ್ಮ ಅತ್ಯುತ್ತಮ ದೀಪಾವಳಿ ಮಾರಾಟವಾಗಿದೆ” ಎಂದು ಹೇಳಿದ್ದಾರೆ. ಚೀನಾ ಮೂಲದ ಕಂಪನಿಗಳಾದ ಶಿಯೋಮಿ, ಒಪ್ಪೋ, ವೀವೋ ಕಂಪನಿಗಳ ಕಠಿಣ ಸ್ಪರ್ಧೆಯ ನಡುವೆ ಸ್ಯಾಮ್‌ಸಂಗ್‌ ಉತ್ತಮ ಮಾರಾಟ ದಾಖಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!