ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ ಕರ್ನಾಟಕ ಬಂದ್ಗೆ ಚಿತ್ರರಂಗ ಕೂಡ ಸಾಥ್ ನೀಡಿದ್ದು, ಶಿವರಾಜ್ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ. ಇಂದು ಫಿಲಂ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್ ತಂಡ ಶಿವರಾಜ್ಕುಮಾರ್ ಮನೆಗೆ ಭೇಟಿ ನೀಡಿದ್ದು, ಪ್ರತಿಭಟನೆ ಬಗ್ಗೆ ಮಾತನಾಡಿದ್ದಾರೆ.
ಶಿವರಾಜ್ಕುಮಾರ್ ಬಂದ್ಗೆ ಬೆಂಬಲ ಘೋಷಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ. ಈ ಬಗ್ಗೆ ಕುಮಾರ್ ಮಾತನಾಡಿ, ಶಿವಣ್ಣಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು ಅವರು ಬಂದಿದ್ದು ಆನೆಬಲ ಬಂದಂತೆ ಆಗಿದೆ. ಶ್ರೀಮುರುಳಿ, ವಿಜಯ ರಾಘವೇಂದ್ರ, ವಿನೋದ್ ಪ್ರಭಾಕರ್, ಪ್ರೇಮ್, ಅಜಯ್ ರಾವ್, ಶ್ರೀಮುರುಳಿ, ಮಾಲಾಶ್ರೀ, ಶ್ರುತಿ ಹಾಗೂ ಪ್ರೇಮ ಅವರಿಗೂ ಆಹ್ವಾನ ನೀಡಿದ್ದು, ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.