ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ಸ್ಟಾರ್ ದುನಿಯಾ ವಿಜಯ್ ಇಂದು ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷದಂತೆ ವಿಜಯ್ ಕುಮಾರ್ ಅವರು ತಮ್ಮ ತಂದೆ-ತಾಯಿಯ ಸಮಾಧಿಯ ಮುಂದೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ವಿಜಯ್ ಕುಮಾರ್ ಆನೇಕಲ್ ಸಮೀಪದ ಕುಂಬಳನಹಳ್ಳಿಯಲ್ಲಿರುವ ತಮ್ಮ ಜಮೀನಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ತಂದೆ ತಾಯಿಯ ಸಮಾಧಿಯನ್ನು ದೇವಾಲಯದಂತೆ ನಿರ್ಮಿಸಿ ವಿಶೇಷವಾಗಿ ಅಲಂಕರಿಸಿದರು. ಅದರ ನಂತರ, ಅವರು ಪೂಜೆ ಸಲ್ಲಿಸಿ, ಬರೋ ಅಭಿಮಾನಿಗಳನ್ನು ಭೇಟಿಯಾಗಲು ಮತ್ತು ಅವರೊಂದಿಗೆ ದಿನ ಕಳೆಯಲು ಯೋಜಿಸಿದ್ದಾರೆ.
ರಾತ್ರಿಯಿಂದಲೇ ಹುಟ್ಟುಹಬ್ಬಕ್ಕೆ ಸಕಲ ಸಿದ್ಧತೆ ನಡೆದಿತ್ತು. ರಾತ್ರಿಯೂ ಅನೇಕ ಅಭಿಮಾನಿಗಳು ವಿಶ್ ಮಾಡಲು ಬಂದಿದ್ದರು. ಒಟ್ಟು 5,000 ಅಭಿಮಾನಿಗಳಿಗೆ ಮಧ್ಯಾಹ್ನದ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿದೆ.
ವಿಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಭೀಮ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ‘ಸಲಗ’ ಚಿತ್ರದ ನಂತರ ದುನಿಯಾ ವಿಜಯ್ ನಿರ್ದೇಶನದ ‘ಭೀಮ’ ಚಿತ್ರದ ಸಂಪೂರ್ಣ ಟೀಸರ್ ಬಿಡುಗಡೆಯಾಗಿದೆ.